May 24, 2026
Sunday, May 24, 2026
spot_img

ಚುನಾವಣಾ ಅಧಿಕಾರಿ ನೇಮಕ | ಕೇರಳದಲ್ಲಿ ಹೆಚ್ಚಾದ ರಾಜಕೀಯ ಕಾವು: ‘ಕೈ’ ವಿರುದ್ಧ ಬಿಜೆಪಿ-ಎಡಪಕ್ಷಗಳ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಸರ್ಕಾರದ ಹೊಸ ಆಡಳಿತಾತ್ಮಕ ನಿರ್ಧಾರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ನೇಮಿಸಿರುವ ಕ್ರಮಕ್ಕೆ ಬಿಜೆಪಿ ಮತ್ತು ಸಿಪಿಐ(ಎಂ) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ದ್ವಂದ್ವ ನಿಲುವಿನ ಆರೋಪಗಳು ಕೇಳಿಬರುತ್ತಿವೆ.

ರಾಹುಲ್ ಗಾಂಧಿ ಹೇಳಿಕೆ ಮುಂದಿಟ್ಟು ಬಿಜೆಪಿ ಟೀಕೆ

ಬಿಜೆಪಿ ನಾಯಕ ಕೆ. ಸುರೇಂದ್ರನ್, ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಅಧಿಕಾರಿಯೊಬ್ಬರಿಗೆ ಸರ್ಕಾರ ಹುದ್ದೆ ನೀಡಿದ್ದನ್ನು ಕಾಂಗ್ರೆಸ್ ಟೀಕಿಸಿತ್ತು ಎಂದು ನೆನಪಿಸಿದರು. ಈಗ ಕೇರಳದಲ್ಲೂ ಅದೇ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಿರುವಾಗ ಕಾಂಗ್ರೆಸ್ ತನ್ನ ಹಿಂದಿನ ಹೇಳಿಕೆಗಳಿಗೆ ಏನು ಉತ್ತರ ನೀಡುತ್ತದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:

ಸಿಪಿಐ(ಎಂ) ಕೂಡ ಕಾಂಗ್ರೆಸ್ ವಿರುದ್ಧ ಗರಂ

ಈ ನೇಮಕಾತಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡಿಸುತ್ತದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಚುನಾವಣೆ ಮುಗಿದ ತಕ್ಷಣವೇ ಹಿರಿಯ ಅಧಿಕಾರಿಗೆ ಪ್ರಮುಖ ಹುದ್ದೆ ನೀಡಿರುವುದು ಸಂಶಯಗಳಿಗೆ ಕಾರಣವಾಗಿದೆ ಎಂದು ಪಕ್ಷ ಹೇಳಿದೆ.

ಸರ್ಕಾರದ ಸಮರ್ಥನೆ

ಆದರೆ ಕಾಂಗ್ರೆಸ್ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿದೆ. ಸಚಿವರು ಮಾತನಾಡಿ, ಅಧಿಕಾರಿಗಳನ್ನು ಯಾವ ಹುದ್ದೆಗೆ ನೇಮಿಸಬೇಕು ಎಂಬುದು ಸರ್ಕಾರದ ಹಕ್ಕು ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರವನ್ನು ರಾಜಕೀಯವಾಗಿ ಬಣ್ಣಿಸಲಾಗುತ್ತಿದೆ ಎಂದು ಸರ್ಕಾರ ಪ್ರತಿಕ್ರಿಯಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !