ಚುನಾವಣೆ ಸಿದ್ಧತೆ: ಮಧ್ಯಪ್ರದೇಶಕ್ಕೆ ನಾಲ್ಕು ರಾಜ್ಯಗಳ ಬಿಜೆಪಿ ಶಾಸಕರು ಭೇಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶಕ್ಕೆ ಚುನಾವಣೆ ಸಿದ್ಧತೆಯ ಕ್ರಮವಾಗಿ ವಸ್ತುಸ್ಥಿತಿ ವಿವರ ಪಡೆಯಲು ಉತ್ತರ ಪ್ರದೇಶ, ಗುಜರಾತ್, ಬಿಹಾರ, ಮಹಾರಾಷ್ಟ್ರದಿಂದ ಬಿಜೆಪಿ ಶಾಸಕರು ಆಗಮಿಸಿದ್ದಾರೆ. ಮಾಹಿತಿ ಪಡೆಯಲು ಪ್ರತಿ ಶಾಸಕರಿಗೂ ತಲಾ ಒಂದು ಕ್ಷೇತ್ರ ನಿಗದಿಪಡಿಸಲಾಗಿದೆ.

ಮುಖಂಡರ ಪ್ರಕಾರ, ನಾಲ್ಕು ರಾಜ್ಯಗಳಿಂದ ಆಗಮಿಸಿರುವ ಶಾಸಕರಿಗಾಗಿ ಬಿಜೆಪಿ ಶನಿವಾರದಿಂದ ತರಬೇತಿ ಆರಂಭಿಸಿದೆ. ತರಬೇತಿ ಕಾರ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಚಾಲನೆ ನೀಡಿದರು.

ಭಾನುವಾರದಿಂದ ಈ ಎಲ್ಲ ಶಾಸಕರು ತಮಗೆ ನಿಗದಿಪಡಿಸಿರುವ ಕ್ಷೇತ್ರಗಳಿಗೆ ತೆರಳಲಿದ್ದು, ಚುನಾವಣೆ ಪೂರ್ವದಲ್ಲಿ ವಸ್ತುಸ್ಥಿತಿಯ ವಿವರ ಪಡೆಯಲಿದ್ದು, ಸ್ಥಳೀಯ ಕಾರ್ಯಕರ್ತರು, ಮತದಾರರ ಜೊತೆಗೂ ಅವರು ಚರ್ಚೆ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!