ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಒಂದೆಡೆ ಬಿಜೆಪಿ ಬಹುಮತದತ್ತ ದಾಪುಗಾಲಿಡುತ್ತಿದ್ದರೆ, ಕೆಲವು ಕ್ಷೇತ್ರಗಳಲ್ಲಿ ಆಪ್ ಪೈಪೋಟಿ ನೀಡುತ್ತಿದೆ.
ಆರಂಭಿಕ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ಶಾಹಿಬ್ ಸಿಂಗ್ ವಿರುದ್ಧ 200ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಕೇಜ್ರಿವಾಲ್ ಸತತ 2 ಸುತ್ತುಗಳಲ್ಲಿ ಅಲ್ಪ ಮುನ್ನಡೆ ಕಂಡಿದ್ದಾರೆ.
ಈವರೆಗೆ ಕೇಜ್ರಿವಾಲ್ ಒಟ್ಟು 6,442 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ಬಿಜೆಪಿ ಅಭ್ಯರ್ಥಿ ಪರ್ವೇಶ್ 6,099 ಮತಗಳನ್ನು ಪಡೆದು ಹಿನ್ನಡೆ ಕಾಯ್ದುಕೊಂಡಿದ್ದಾರೆ.