ಚುನಾವಣೆ ಮುಕ್ತಾಯ: ರಿಲ್ಯಾಕ್ಸ್ ಮೂಡ್​ಗೆ ಜಾರಿದ ಸಿದ್ದು-ಡಿಕೆಶಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಲ್ಲಿ ಎರಡು ಹಂತದ ಲೋಕಸಭಾ ಚುನಾವಣೆ (Loksabha Elections 2024) ಮುಕ್ತಾಯವಾಗಿದೆ. ಎಲೆಕ್ಷನ್​​ ಸಮಾವೇಶ, ರ್ಯಾಲಿ, ಕ್ಯಾಂಪೇನ್​ಗಳಲ್ಲಿ ಭಾಗಿಯಾಗಿದ್ದ ರಾಜ್ಯ ನಾಯಕರು ವಿಶಾಂತ್ರಿಗೆ ಜಾರಿದ್ದಾರೆ.

ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DJ Shivakumar) ಅವರು ಚುನಾವಣೆ ಮುಗಿಯುತ್ತಿದ್ದಂತೆಯೇ ಉಭಯ ನಾಯಕರು ವಿಶಾಂತ್ರಿಗೆ ಜಾರಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ರೆಸಾರ್ಟ್​ವೊಂದಕ್ಕೆ ಹೋಗಿದ್ದರೆ, ಸಿದ್ದರಾಮಯ್ಯ ಊಟಿಯತ್ತ ಮುಖ ಮಾಡಿದ್ದಾರೆ.

ಡಿಕೆ ಶಿವಕುಮಾರ್​ ಅವರು ಕುಟುಂಬ ಸಮೇತ ರೆಸಾರ್ಟ್​ ಮೊರೆ ಹೋಗಿದ್ದಾರೆ. ಚಿಕ್ಕಮಗಳೂರಿನ ಸಾರಾಯ್​ ರೆಸಾರ್ಟ್​ನಲ್ಲೇ ಡಿಕೆಶಿ ಕುಟುಂಬ ವಾಸ್ತವ್ಯ ಹೂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಜತೆ ಸೋದರ ಡಿ.ಕೆ.ಸುರೇಶ್, ಶಾಸಕರಾದ ಡಾ.ರಂಗನಾಥ್, ಇಕ್ಬಾಲ್ ಹುಸೇನ್ ಕೂಡ ರೆಸಾರ್ಟ್​ಗೆ ತಂಗಿದ್ದಾರೆ. ಸೆರಾಯ್ ರೆಸಾರ್ಟ್​ ಡಿ.ಕೆ.ಶಿವಕುಮಾರ್ ಅಳಿಯ ಅಮಾರ್ತ್ಯ ಒಡೆತನದಾಗಿದ್ದು, ನಾಳೆ(ಮೆ 08) ಸಂಜೆವರೆಗೆ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದುಬಂದಿದೆ.

ಊಟಿಯತ್ತ ಸಿದ್ದರಾಮಯ್ಯ ಚಿತ್ತ
ರಾಜ್ಯದಲ್ಲಿ ಲೋಕಸಭಾ ಮತದಾನ ಇಂದಿಗೆ ಅಂತ್ಯವಾಗಿದೆ. ಹಾಸನ ಅಶ್ಲೀಲ ವಿಡಿಯೋ ಪ್ರಕರಣ, ಮಹಿಳೆಯ ಕಿಡ್ನಾಪ್​ ಕೇಸ್​ನಲ್ಲಿ ಕಾಂಗ್ರೆಸ್​- ಜೆಡಿಎಸ್​ ಮಧ್ಯೆ ವಾಕ್ಸಮರ ನಡೆಯುತ್ತಿದೆ. ಈ ಎಲ್ಲ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿದ್ದರು ಸಿಎಂ ಸಿದ್ದರಾಮಯ್ಯ, ಯಾವುದಕ್ಕೂ ತಲೆ ಕಡೆಸಿಕೊಳ್ಳದೇ ವಿಶ್ರಾಂತಿಗೆ ಹೋಗಿದ್ದಾರೆ. ಸಚಿವ ಹೆಚ್​.ಸಿ ಮಹದೇವಪ್ಪ ಜೊತೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ಊಟಿಗೆ ತೆರಳುತ್ತಿದ್ದಾರೆ. ಬೆಂಗಳೂರಿನ ಹೆಚ್​ಎಎಲ್​ ವಿಮಾನ ನಿಲ್ದಾಣದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. ಬಳಿಕ ಮೈಸೂರಿನಿಂದ ಊಟಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್​.ಸಿ ಮಹದೇವಪ್ಪ ತೆರಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!