ದಮ್ಮು, ತಾಕತ್ ಮೇಲೆ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತೆ: ಬಿ.ಸಿ.ಪಾಟೀಲ್‌

ಹೊಸದಿಗಂತ ವರದಿ ಹಾವೇರಿ:

ಅವರ ಧಮ್ಮು, ತಾಕತ್ತು ಮೂರು ಬಾರಿ ನೋಡಿ ಆಗಿದೆ, ಅವರ ದಮ್ಮು ಗೊತ್ತಾಗಿದೆ,
ನನಗೆ ಧಮ್ ಇರೋದಕ್ಕೆ ಅವರಿಗೆ ಉಗ್ರಾಣ ನಿಗಮದ ಅದ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನ ಮಾನ ಬಂದಿತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಹಾವೇರಿ ಜಿಲ್ಲೆ ಹಿರೇಕೇರೂರಿನ ಮನೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹಾವೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಯು ಬಿ ಬಣಕಾರ ಅವರು ಬಿಸಿಪಿ ಅವರು ಸೇರಿದಂತೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಶಾಸಕರು ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಧಮ್ಮು ತಾಕತ್ತಿನ ಬಗ್ಗೆ ಮಾತಾಡಿದಕ್ಕೆ ಟಾಂಗ್ ನೀಡಿದ ಅವರು, ಧಮ್ , ತಾಕತ್ ಮೇಲೆ ಪ್ರಸಕ್ತ ಚುನಾವಣೆ ನಡೆಯಲ್ಲ, ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಕೆಲಸ ಮಾಡಿದ್ದಾರೆ ಅಂತ ಪುಸ್ತಕ ಬಿಡುಗಡೆ ಮಾಡಲಿ, ಆವಾಗ ನಾನು ಒಪ್ಪಿಕೊಳ್ಳುತ್ತೇನೆ ಎಂದರು.

ಸಿಡಿ ಬಗ್ಗೆ ಏಕೆ ನ್ಯಾಯಾಲಯದಲ್ಲಿ ಸ್ಟೇ ದರು ಎಂಬ ಹೇಳಿಕೆಗೆ ಟಾಂಗ್ ನೀಡಿ. ನಮ್ಮ ಹತ್ತಿರ ಮೀರ್ ಸಾಧಿಕ್ ರಂಥ ಜನ ನಮ್ಮ ಸುತ್ತ ಮುತ್ತಲೇ ಇರ್ತಾರೆ ಅಂಥವರಿಂದ ರಕ್ಷಣೆ ಅಗತ್ಯ ಹೀಗಾಗಿ ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಯಿತು ಎಂದರು.

ಇದೇ ಬಣಕಾರ್ ನಮ್ ಜೊತೆಗೆ ಇದ್ದು ಈಗ ಕಾಂಗ್ರೆಸ್ ಸೇರಿದ್ದಾರೆ. ನಾವು ವ್ಯಭಿಚಾರ ಏನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇಂದು ಹಿರೇಕೇರೂರು ಕ್ಷೇತ್ರದಲ್ಲಿ 461 ಕೋಟಿ ರೂಪಾಯಿ ಕಾಮಗಾರಿಗಳಿಗೆ ಚಾಲನೆ ಕೊಡ್ತಿದ್ದೇವೆ. 38 ಕೋಟಿ ರೂಪಾಯಿ ಮಡ್ಲೂರು ಏತ ನೀರಾವರಿ ಸಿಎಂ ಬೊಮ್ಮಾಯಿ ಯೋಜನೆ ಲೋಕಾರ್ಪಣೆ ಮಾಡ್ತಾ ಇದ್ದಾರೆ.

2018 ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ತಾಲೂಕಿಗೆ 6 ನೀರಾವರಿ ಯೋಜನೆ ತಂದಿದ್ದೇನೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ನಮ್ಮ ತಾಲೂಕಿಗೆ ಬರಗಾಲ ಬರುವುದಿಲ್ಲ ಅದೊಂದು ತೃಪ್ತಿ ನನಗೆ ಇದೆ ಎಂದು ತಿಳಿಸಿದರು.

ಮಾತು ಕೊಟ್ಟಂತೆ ಮಹಿಳೆಯರಿಗೆ ಗಾರ್ಮೆಂಟ್ಸ್ ಮಾಡ್ತೀವಿ ಅಂದಿದ್ದೆ ಅದನ್ನೂ ಮಾಡಿದ್ದೇನೆ. ನಾನು ಏನು ಮಾಡಿದ್ದೇನೆ ಅಂತ ಕಿರು ಹೊತ್ತಿಗೆ ಬಿಡುಗಡೆ ಮಾಡುತ್ತೇನೆ. ಏನೇನು ಕೆಲಸ ಆಗಿದೆ ಅಂತ ಮನೆ ಮನೆಗೆ ಕಿರು ಹೊತ್ತಿಗೆ ಬಿಡುಗಡೆ ಮಾಡುತ್ತೇನೆ. ಜನತೆಗೆ ಈ ಬಗ್ಗೆ ವರದಿ ಒಪ್ಪಿಸುವೆ ಎಂದರು.

ರಮೇಶ್ ಜಾರಕಿಹೊಳಿಯವರದ್ದು ಅನವಷ್ಯಕ ಬಿಡುಗಡೆ ಮಾಡಿದರು. ಆದರೆ ಏನಾಯ್ತು? ಬಿ ರಿಪೋರ್ಟ್ ಆಯ್ತು. ನಾವು ನಮ್ಮ ಗೌರವ ಕಾಯುವ ಕೆಲಸ ಮಾಡಲೇಬೇಕು. ಈಗ ಎಲ್ಲಾ ಎಲೆಕ್ಟ್ರಾನಿಕ್ ಮಾದ್ಯಮದ ಕಾಲ, ಏನು ಬೇಕಾದರೂ ಮಾಡ್ತಾರೆ ಎಂದ ಸಚಿವ ಬಿ.ಸಿ ಪಾಟೀಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!