ಚುನಾವಣಾ ಬಾಂಡ್ ಎನ್ನುವಂತಹದ್ದು ಒಂದು ಹೊಸ ಪ್ರಯೋಗ: ದತ್ತಾತ್ರೇಯ ಹೊಸಬಾಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಬಾಂಡ್ ಅಚಾನಕ್ ಆಗಿ ಬಂದಂತಹದ್ದಲ್ಲ. ಆದರೆ ಅವುಗಳ ಉಪಯೋಗ ಮತ್ತು ಪರಿಣಾಮಾತ್ಮಕತೆಯೇನು ಎನ್ನುವುದನ್ನು ಗಮನಿಸಿ ಸ್ವೀಕರಿಸಬೇಕು ಎನ್ನುವುದು ಸಂಘದ ವಿಚಾರವಾಗಿದೆ ಎಂದು ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ನಾಗಪುರದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಚುನಾವಣಾ ಬಾಂಡ್ ಕುರಿತು ರಾಷ್ಟ್ರದಲ್ಲಿ ಈ ಮೊದಲೂ ಚರ್ಚೆಗಳಾಗಿವೆ. ಪ್ರಸ್ತುತ ಚುನಾವಣಾ ಬಾಂಡ್ ಎನ್ನುವಂತಹದ್ದು ಒಂದು ಹೊಸ ಪ್ರಯೋಗದ ರೂಪದಲ್ಲಿ ಬಂದಿದೆ. ಇವಿಎಂ ಬಂದಾಗಲೂ ಅದರ ಕುರಿತಾದ ಚರ್ಚೆ ದೇಶದಲ್ಲಿ ಆಗಿತ್ತು. ಹೊಸ ಪ್ರಯೋಗಗಳು ಬಂದಾಗ ಪ್ರಶ್ನೆಗಳು ಏಳುವುದು ಸಹಜ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!