ರಾಯಲ್‌ ಎನ್‌ಫೀಲ್ಡ್‌ನಿಂದ ಎಲೆಕ್ಟ್ರಿಕ್‌ ಬೈಕ್‌: ಕಂಪನಿ ಸಿಇಒ ಏನಂತಾರೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೈಕ್‌ ಪ್ರಿಯರ ಪಾಲಿಗೆ ನೆಚ್ಚಿನ ಬ್ರ್ಯಾಂಡ್‌ ಆಗಿರುವ ʼರಾಯಲ್‌ ಎನ್‌ಫೀಲ್ಡ್ʼ ಇವಿ ಕ್ಷೇತ್ರದಲ್ಲಿಯೂ ಸಂಶೋಧನೆಗಳನ್ನು ನಡೆಸುತ್ತಿದ್ದು ಈ ಕುರಿತು ಮಹತ್ವದ ಘೋಷನೆಯೊಂದನ್ನು ಮಾಡಿದೆ. ಇಷ್ಟುದಿನ ಹೆವಿ ಸಿಸಿ ಬೈಕ್‌ ಸೆಗ್ಮೆಂಟ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಯಲ್‌ ಎನ್‌ಫೀಲ್ಡ್‌ ಶೀಘ್ರದಲ್ಲಿಯೇ ತನ್ನ ಎಲೆಕ್ಟ್ರಿಕ್‌ ಬೈಕ್‌ ಅನ್ನು ಅನಾವರಣಗೊಳಿಸಲಿದೆ. ಕಂಪನಿಯು ತನ್ನ EV ಪ್ರಯಾಣದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿರುವ ಕಾರಣ ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು 2025 ರ ವೇಳೆಗೆ ಬಿಡುಗಡೆ ಮಾಡಲು ಯೋಜಿಸುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ಹಿರೋ, ಏಥರ್‌, ಓಲಾ, ಟಿವಿಎಸ್‌ ಸೇರಿದಂತೆ ಹಲವು ಕಂಪನಿಗಳು ಈಗಾಗಲೇ ಎಲೆಕ್ಟ್ರಿಕ್‌ ಬೈಕ್‌ ಉತ್ಪಾದನೆಯಲ್ಲಿ ತೊಡಗಿಕೊಂಡಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ಬೈಕ್‌ ಗಳು ಪ್ರಾಮುಖ್ಯತೆ ಗಳಿಸಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ರಾಯಲ್‌ ಎನ್‌ಫೀಲ್ಡ್‌ಕೂಡ ಕಾರ್ಯನಿರತವಾಗಿರುವುದಾಗಿ ಹೇಳಿಕೊಂಡಿದೆ.

ಈ ಕುರಿತು ಕಂಪನಿಯ ಸಿಇಒ ಬಿ ಗೋವಿಂದರಾಜನ್ ಪ್ರತಿಕ್ರಿಯಿಸಿದ್ದು “ನಾವು ನಮ್ಮ EV ಪ್ರಯಾಣದಲ್ಲಿ ಪ್ರಗತಿ ಹೊಂದುತ್ತಿದ್ದೇವೆ ಮತ್ತು ಈಗಾಗಲೇ ಪರೀಕ್ಷೆಯ ಮುಂದುವರಿದ ಹಂತಗಳಲ್ಲಿ ಹಲವಾರು ಅಭಿವೃದ್ಧಿ ಸಾಧಿಸಲಾಗಿದೆ. ಮಾರುಕಟ್ಟೆ ಮತ್ತು ಪ್ರವೃತ್ತಿಗಳನ್ನು ಅರ್ಥಮಾಡಿಕೊಳ್ಳಲು ನಾವು ಸಾಕಷ್ಟು ಸಮಯವನ್ನು ವ್ಯಯಿಸಿದ್ದು ಎಲೆಕ್ಟ್ರೋ-ಮೊಬಿಲಿಟಿ ಪ್ರಯಾಣದ ಕಡೆಗೆ ತುಂಬಾ ವಿಭಿನ್ನವಾದ ವಿಧಾನವನ್ನು ಅನುಸರಿಸುತ್ತಿದ್ದೇವೆ” ಎಂದಿದ್ದಾರೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ರಾಯಲ್‌ ಎನ್‌ಫೀಲ್ಡ್‌ ತನ್ನ ಮೊದಲ ಮೊದಲ ಇ-ಬೈಕ್ ಗೆ L1C ಎಂಬ ಸಂಕೇತನಾಮವನ್ನು ಇರಿಸಿದ್ದು ಇದನ್ನು 2025 ರಲ್ಲಿ ಮಾರುಕಟ್ಟೆಗೆ ಇಳಿಸುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!