ಹೊಸದಿಗಂತ ಡಿಜಿಟಲ್ ಡೆಸ್ಕ್:
ಛಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು 80 ವರ್ಷದ ವೃದ್ಧಸಾವನ್ನಪ್ಪಿದ್ದು ಇತರ ನಾಲ್ಕು ಜನರಿಗೆ ಗಾಯವಾದ ಘಟನೆ ನಡೆದಿದೆ. ತೆಲಂಗಾಣದಲ್ಲಿನಿಜಾಮಾಬಾದ್ ಜಿಲ್ಲೆಯಲ್ಲಿ ಘಟನೆ ವರದಿಯಾಗಿದ್ದು ಮೃತನನ್ನು ಬಿ.ರಾಮಸ್ವಾಮಿ ಎಂದು ಗುರುತಿಸಲಾಗಿದೆ. ಹಾಗೂ ಈತನ ಕುಟುಂಬದ ಇತರ ನಾಲ್ಕು ಮಂದಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಕಳೆದ ಒಂದು ವರ್ಷದಿಂದ ಎಲೆಕ್ಟ್ರಿಕ್ ಸ್ಕೂಟರ್ ಬಳಕೆ ಮಾಡುತ್ತಿದ್ದರು. ಛಾರ್ಜ ಹಾಕಿದ್ದ ವೇಳೆ ಘಟನೆ ನಡೆದಿದ್ದು ಸ್ಕೂಟರ್ ತಯಾರಿಸಿರುವ ಸ್ಥಳೀಯ ಸ್ಟಾರ್ಟಪ್ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.