ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಸಿದರೆ ಕೆಮಿಕಲ್ ಕ್ಯಾಸ್ಟ್ರೇಶನ್: ಪೆರು ಸರ್ಕಾರ ನಿರ್ಧಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಪೆರುವಿಯನ್ ಸರ್ಕಾರವು ಹೊಸ ಕಾನೂನನ್ನು ಕಾರಿಗೆ ತಂದಿದೆ. ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ದಂ-ಡದ ಜೊತೆಗೆ ರಾಸಾಯನಿಕ ಕ್ಯಾಸ್ಟ್ರೇಶನ್ (ಕೆಮಿಕಲ್ ಕ್ಯಾಸ್ಟ್ರೇಶನ್) ವಿಧಿಸಲು ಅನುವು ಮಾಡಿಕೊಡುವ ಮಸೂದೆಯನ್ನು ಅಂಗೀಕರಿಸಲು ಸಿದ್ಧತೆ ನಡೆಯುತ್ತಿದೆ ಎಂದು ಕ್ಯಾಬಿನೆಟ್ ಸದಸ್ಯರು ಹೇಳಿದ್ದಾರೆ. 48 ವರ್ಷದ ವ್ಯಕ್ತಿಯೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಈ ಬಿಲ್‌ ಜಾರಿ ಮಾಡಲು ಚಿಂತನೆ ನಡೆದಿದೆ.

ಈ ಘಟನೆಯೊಂದಿಗೆ ಕಮಾಂಡ್ ಸರ್ಕಾರವು ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಳ್ಳಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸಚಿವ ಫೆಲಿಕ್ಸ್ ಚೆರೋ, ಅತ್ಯಾಚಾರ ಎಸಗುವವರಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಹೆಚ್ಚುವರಿ ದಂಡವಾಗಲಿದೆ ಎಂದು ನಾವು ಭಾವಿಸುತ್ತೇವೆ. ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗುವವರನ್ನು ಜೈಲಿಗೆ ಹಾಕಬೇಕು. ಜೊತೆಗೆ ಶಿಕ್ಷೆಯ ಅಂತ್ಯದ ವೇಳೆಗೆ ರಾಸಾಯನಿಕ ಕ್ಯಾಸ್ಟ್ರೇಶನ್ ವಿಧಿಸಲು ಸರ್ಕಾರ ಉದ್ದೇಶಿಸಿದೆ ಎಂದರು.

ಮಸೂದೆ, ಕಾನೂನಾಗಲು ಪೆರುವಿನ ವಿರೋಧಪಕ್ಷ ಕಾಂಗ್ರೆಸ್ ಅನುಮೋದನೆ ದೊರೆಯಬೇಕು ಎಂದಿದ್ದಾರೆ. ಬಹುಪಾಲು ಶಾಸಕರು ಅಪ್ರಾಪ್ತ ವಯಸ್ಕರ ಅತ್ಯಾಚಾರಕ್ಕೆ, ಶಿಕ್ಷೆಯಾಗಿ ಮರಣದಂಡನೆಯನ್ನು ಸೇರಿಸಲು ಪರ್ಯಾಯ ಪ್ರಸ್ತಾಪವನ್ನು ಮಾಡಿದರು.

ಇಲ್ಲಿ ಇನ್ನೊಂದು ವಿಷಯವೆಂದರೆ ಅಲ್ಲಿನ ಮಹಿಳಾ ಸಂಘಗಳು ಸರ್ಕಾರದ ಚಿಂತನೆಯ ಮೇಲೆ ಬೆಟ್ಟು ಮಾಡಿರುವುದು ಬೆಳಕಿಗೆ ಬಂದಿದೆ. ಮಹಿಳಾ ಹಕ್ಕುಗಳ ಗುಂಪಿನ ಫ್ಲೋರಾ ಟ್ರಿಸ್ಟಾನ್ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯವನ್ನು ಸರ್ಕಾರ ಅರ್ಥಮಾಡಿಕೊಳ್ಳದಿರುವುದಕ್ಕೆ ನಮಗೆ ಚಿಂತೆಯಿದೆ. ನಮಗೆ ಬೇಕಾಗಿರುವುದು ಕಾನೂನು ಪ್ರಕ್ರಿಯೆಯನ್ನು ವೇಗಗೊಳಿಸುವುದು, ಹಾಗೂ ರಕ್ಷಣೆ ಒದಗಿಸುವುದು ಎಂದಿದ್ದಾರೆ.

ರಾಜಕಾರಣಿಗಳು ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ, 14 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಮಾಡುವವರಿಗೆ ರಾಸಾಯನಿಕ ಕ್ಯಾಸ್ಟ್ರೇಶನ್ ವಿಧಿಸುವ ಆಲೋಚನೆಯನ್ನು ಕಾಂಗ್ರೆಸ್ ಮುಂದಿಟ್ಟಿತು. ಆದರೆ ಪ್ರಸ್ತಾವನೆ ಅನುಷ್ಠಾನಕ್ಕೆ ಬರಲಿಲ್ಲ ಎಂಬುದು ಪ್ರಮುಖ ಸಂಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!