ಚಾರ್ಜಿಗೆ ಇಟ್ಟಿದ್ದ ಎಲೆಕ್ಟ್ರಿಕ್ ಸ್ಕೂಟಿ ಸ್ಫೋಟ, ಯುವತಿ ಸಾವು ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಎಲೆಕ್ಟ್ರಿಕ್​ ಸ್ಕೂಟರ್​​ ಮತ್ತು ಎಲ್​ಪಿಸಿ ಸಿಲಿಂಡರ್​ ಸ್ಫೋಟಗೊಂಡು ಎರಡು ಅಂತಸ್ತಿನ ಕಟ್ಟಡ ಬೆಂಕಿಗಾಹುತಿಯಾಗಿದೆ. ಭಾರೀ ಬೆಂಕಿ ಕಾಣಿಸಿಕೊಂಡ ಪರಿಣಾಮ 18 ವರ್ಷದ ಯುವತಿ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಸೂರತ್​ನ ಲಿಂಬಯತ್​ ಬಳಿಯ ಲಕ್ಷ್ಮೀ ಪಾರ್ಕ್​ ಸೊಸೈಟಿ ಬಳಿ ಈ ದುರ್ಘಟನೆ ನಡೆದಿದೆ. ಬೆಳಿಗ್ಗೆ 5;30ರ ಸುಮಾರಿಗೆ ಸಿಲಿಂಡರ್​ ಎಲೆಕ್ಟ್ರಿಕ್ ಸ್ಕೂಟರ್​​ ಸ್ಫೋಟಗೊಂಡಿದೆ. ರಾತ್ರಿ ಪೂರ್ತಿ ಎಲೆಕ್ಟ್ರಿಕ್ ಸ್ಕೂಟರ್​ ಚಾರ್ಜ್​ ಹಾಕಿದ ಪರಿಣಾಮ ಶಾರ್ಟ್​ ಸರ್ಕ್ಯೂಟ್​ ಆಗಿದೆ. ಹೀಗಾಗಿ ಬೆಂಕಿ ಕಾಣಿಸಿಕೊಂಡು ಪಸರಿಸಿದೆ. ಪರಿಣಾಮ ಹತ್ತಿರದ ಸಿಲಿಂಡರ್​ಗೂ ತಗುಲಿದ್ದು ಸ್ಫೋಟಗೊಂಡಿದೆ.

ಮನೆಯಲ್ಲಿ ಮಲಗಿದ್ದ 18 ವರ್ಷದ ಯುವತಿ ದೋಲರಾಮ್​ ಸಿರ್ವಿ ಸಾವನ್ನಪ್ಪಿದ್ದಾಳೆ. ಆಕೆಯ ತಾಯಿ ಚಂಪಾ ಸಿರ್ವಿ (42), ತಂದೆ ಡೋಲಾರಾಮ್​ ಸಿರ್ವಿ (46), ಸಹೋದರಿ ದೇವಿಕಾ (14) ಮತ್ತು ಚಿರಾಗ್​ (8) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಸ್ಮಿಮರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!