ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿ ವಿದ್ಯುತ್ ಆಘಾತಕ್ಕೆ ಬಲಿ

ಹೊಸ ದಿಗಂತ ವರದಿ, ಯಲ್ಲಾಪುರ:

ತಾಲ್ಲೂಕಿನ ಉಮ್ಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಸೇಮನೆ ಎಂಬಲ್ಲಿ ಮಂಗಳವಾರ ವಿದ್ಯುತ್ ಸರ್ವಿಸ್ ಲೈನ್ ಸರಿಪಡಿಸಲು ಹೋಗಿದ್ದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತಕ್ಕೆ ಬಲಿಯಾಗಿದ್ದಾರೆ.
ಪಟ್ಟಣ ವ್ಯಾಪ್ತಿಯ ಸಬಗೇರಿಯ ಆದಂಸಾಬ್ ಇ ಶೇಖ್ (75) ಮೃತಪಟ್ಟವರು. ಅವರು ಉಮ್ಮಚಗಿಯ ಹುಣಸೇಮನೆಯಲ್ಲಿ
ಅತಿಕ್ರಮಣ ಜಮೀನಿನಲ್ಲಿರುವ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸರಿಪಡಿಸಲು ಸಮೀಪದ ವಿದ್ಯುತ್
ಕಂಬವನ್ನು ಏರಿದ್ದರು. ಸರ್ವಿಸ್ ಲೈನ್ ಸರಿಪಡಿಸುತ್ತಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!