October 23, 2026
Friday, October 23, 2026
spot_img

ಹರಿಯಾಣದಲ್ಲಿ ವಿದ್ಯುತ್ ನೌಕರರ ಮುಷ್ಕರದ ಕಿಚ್ಚು: ಕತ್ತಲಿಗೆ ತತ್ತರಿಸಿದ ಮೂರು ಜಿಲ್ಲೆಗಳು, ಬೀದಿಗಿಳಿದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿದ್ಯುತ್ ಖಾಸಗೀಕರಣದ ವಿರುದ್ಧ ನೌಕರರ ಮುಷ್ಕರ, ಮತ್ತೊಂದೆಡೆ ಕರೆಂಟ್‌ ಇಲ್ಲದೆ ಕತ್ತಲಲ್ಲಿ ದಿನ ಕಳೆಯುವಂತಾದ ಜನ. ಹೌದು ಹರಿಯಾಣದ ಗುರುಗ್ರಾಮ್‌, ಫರಿದಾಬಾದ್‌ ಮತ್ತು ನುಹ್‌ ಜಿಲ್ಲೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಸ್ಥಳೀಯ ನಿವಾಸಿಗಳ ಪ್ರಕಾರ, ಬುಧವಾರ ರಾತ್ರಿ 10 ಗಂಟೆಯಿಂದಲೇ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ವಿದ್ಯುತ್ ವ್ಯತ್ಯಯದಿಂದ ಮನೆಗಳ ದೈನಂದಿನ ಕೆಲಸಗಳಷ್ಟೇ ಅಲ್ಲದೆ ಕೈಗಾರಿಕಾ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಮುಷ್ಕರ ಆರಂಭವಾದ ಮೊದಲ 12 ಗಂಟೆಗಳಲ್ಲೇ ವಿದ್ಯುತ್ ಇಲಾಖೆಗೆ ಸುಮಾರು 3,000 ದೂರುಗಳು ಬಂದಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯುತ್ ಕಡಿತಕ್ಕೆ ಆಕ್ರೋಶ; ರಸ್ತೆಯಲ್ಲೇ ಪ್ರತಿಭಟನೆ

ಗುರುಗ್ರಾಮ್‌ನ ಭೀಮಗಢ್ ಖೇರಿ ಪ್ರದೇಶದಲ್ಲಿ ಬುಧವಾರ ರಾತ್ರಿಯಿಂದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು ಎನ್ನಲಾಗಿದೆ. ನಿರಂತರ ಕತ್ತಲೆ ಮತ್ತು ಅನಾನುಕೂಲದಿಂದ ಬೇಸತ್ತ ಸ್ಥಳೀಯರು ಗುರುವಾರ ದೌಲತಾಬಾದ್ ಫ್ಲೈಓವರ್‌ನಲ್ಲಿ ರಸ್ತೆ ತಡೆ ನಡೆಸಿದರು. ಇದರಿಂದ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಂಚಾರ ದಟ್ಟಣೆ ಉಂಟಾಯಿತು.

ಇದನ್ನೂ ಓದಿ:

ವಿದ್ಯುತ್ ಇಲಾಖೆಯ ಅಧಿಕಾರಿಗಳನ್ನು ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆ ಸಿಗಲಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ವಿದ್ಯುತ್ ಪೂರೈಕೆ ಪುನರಾರಂಭವಾಗುವವರೆಗೆ ರಸ್ತೆ ತೆರವುಗೊಳಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು

ರಸ್ತೆ ತಡೆ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಜನರನ್ನು ಅಲ್ಲಿಂದ ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಕ್ರಮ ಕೈಗೊಂಡರು.

ಖಾಸಗೀಕರಣ ವಿವಾದದಿಂದ ಜನರಿಗೆ ಸಂಕಷ್ಟ

ವಿದ್ಯುತ್ ವಿತರಣಾ ವ್ಯವಸ್ಥೆಯ ಖಾಸಗೀಕರಣದ ವಿರುದ್ಧ ಆರಂಭವಾದ ನೌಕರರ ಮುಷ್ಕರವು ಸಾಮಾನ್ಯ ಜನರ ಬದುಕಿನ ಮೇಲೂ ಪರಿಣಾಮ ಬೀರಿದೆ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಇಂತಹ ವಿವಾದಗಳಲ್ಲಿ ನೌಕರರ ಬೇಡಿಕೆಗಳ ಪರಿಹಾರದ ಜೊತೆಗೆ ಜನರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವುದು ಅತ್ಯಗತ್ಯವಾಗಿದೆ.

Must Read