ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರದಲ್ಲಿ ಅರಣ್ಯ ಇಲಾಖೆಯ ಆನೆಯೊಂದು ಏಕಾಏಕಿ ಕುಸಿದು ಬಿದ್ದು, ಹಠಾತ್ ಮೃತಪಟ್ಟಿದೆ.
ಅಕ್ಕಿರಾಜ ಎಂದೇ ಖ್ಯಾತಿಯಾಗಿದ್ದ ವಿನಾಯಗನ್ ಎಂಬ 36 ವರ್ಷದ ಆನೆ ಮೃತಪಟ್ಟಿದ್ದು, ಇದಕ್ಕೆ ಕಾರಣ ತಿಳಿದುಬಂದಿಲ್ಲ.
ಈ ಬಗ್ಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿದ್ದು, ಆನೆ ಏಕಾಏಕಿ ಆನೆ ದಿಢೀರ್ ಕುಸಿದಬಿದ್ದಿದ್ದು, ತುರ್ತು ಚಿಕಿತ್ಸೆ ನೀಡಿ ಆನೆಯನ್ನು ಎಬ್ಬಿಸುವ ಕೆಲಸ ಮಾಡಿದ್ದಾರೆ. ಆದರೆ ಆನೆ ಮೃತಪಟ್ಟಿದೆ, ಇದಕ್ಕೆ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ನಿಖರ ಕಾರಣ ತಿಳಿಯುತ್ತದೆ ಎಂದಿದ್ದಾರೆ.