Friday, June 2, 2023

Latest Posts

ವಿದ್ಯುತ್ ಲೈನ್‌ಗೆ ಸೊಂಡಿಲು ತಗುಲಿ ಆನೆ ಸಾವು

ಹೊಸದಿಗಂತ ವರದಿ ಮಡಿಕೇರಿ:

ವಿದ್ಯುತ್ ಸ್ಪರ್ಶಗೊಂಡು ಕಾಡಾನೆ ಸಾವಿಗೀಡಾಗಿರುವ ಘಟನೆ ದಕ್ಷಿಣ ಕೊಡಗಿನ ಕುಟ್ಟದಲ್ಲಿ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ಕುಟ್ಟ-ನಾಗರಹೊಳೆ ರಸ್ತೆಯ ಕಾಳಿ ದೇವಾಲಯದ ಬಳಿಯ ಕಾಫಿ ತೋಟದಲ್ಲಿ ಈ ದುರ್ಘಟನೆ ಜರುಗಿದೆ.

ಕಾಫಿ ತೋಟದ ನಡುವೆ ಹಾದು ಹೋಗಿದ್ದ 11ಕೆವಿ ವಿದ್ಯುತ್ ಲೈನ್’ಗೆ ಆನೆಯ ಸೊಂಡಿಲು ತಗುಲಿ ಗಂಡಾನೆ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಸೆಸ್ಕ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!