ನೀಲಗಿರಿ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಚೀಲ ತಿಂತಿರೋ ಆನೆ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಡೀಪುರ-ಮದುಮಲೈ ಅರಣ್ಯ ಪ್ರದೇಶದಲ್ಲಿ ಆನೆಯೊಂದು ಪ್ಲಾಸ್ಟಿಕ್ ಕವರ್‌ಗಳನ್ನು ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಇರದಂತೇ ಎಷ್ಟೇ ಗಮನವಹಿಸಿದರೂ, ಪ್ಲಾಸ್ಟಿಕ್ ಕವರ್‌ಗಳ ರಾಶಿ ಎದ್ದು ಕಾಣುತ್ತಿದೆ.
ನೀಲಗಿರಿ ಬೆಟ್ಟಗಳಲ್ಲಿರುವ ಬಂಡೀಪುರ ಮತ್ತು ಮದುಮಲೈ ಪ್ರದೇಶದಲ್ಲಿ ಆನೆ ಪ್ಲಾಸ್ಟಿಕ್ ತಿನ್ನುತ್ತಿದೆ. ಇದು ಆನೆಗೆ ಹಾನಿಕಾರಕ ಎಂದು ಪ್ರಾಣಿಪ್ರೇಮಿಗಳು ಹೇಳಿದ್ದಾರೆ.

ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಸುಸಾಂತ ನಂದಾ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಪರಿಸರವೂ ಜೀರ್ಣಿಸಲಾಗದ ಕಸವನ್ನು ಸೃಷ್ಟಿಮಾಡೋಕೆ ಮನುಷ್ಯದಿಂದ ಮಾತ್ರ ಸಾಧ್ಯ, ಈ ವಿಡಿಯೋ ನೋಡಿ ಮನಸ್ಸಿಗೆ ನೋವಾಯ್ತು. ಈ ರೀತಿ ದೈತ್ಯ ಪ್ರಾಣಿಗಳ ಹೊಟ್ಟೆಗೆ ಪ್ಲಾಸ್ಟಿಕ್ ಕೆಟ್ಟದ್ದು. ಪ್ಲಾಸ್ಟಿಕ್ ತಿನ್ನುವುದರಿಂದ ಎಲಿಮೆಂಟರಿ ಕೆನಲ್‌ಗಳು ಮುಚ್ಚಿಹೋಗುತ್ತವೆ. ಪ್ರತಿಯೊಬ್ಬರೂ ಜವಾಬ್ದಾರಿಯಿಂದ ವರ್ತಿಸಿ ಎಂದಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!