ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯಲ್ಲಿ ಆನೆಗಳ ಗುಂಪು ಪ್ರತ್ಯಕ್ಷವಾಗಿದೆ. ಹೆದ್ದಾರಿಯ ಸುತ್ತಮುತ್ತ ಓಡಾಡುತ್ತಿದ್ದು, ಆತಂಕ ಸೃಷ್ಟಿಸಿದೆ.
ಹೆದ್ದಾರಿಯಲ್ಲಿ ಆನೆಗಳನ್ನ ಕಂಡು ಕೆಲಹೊತ್ತು ವಾಹನ ನಿಲ್ಲಿಸಿದ ಸವಾರರು ಆನೆಗಳೊಂದಿಗೆ ಸೆಲ್ಫಿ ಹಾಗೂ ವೀಡಿಯೋ ತೆಗೆದು ಹುಚ್ಚಾಟವಾಡಿದ್ದಾರೆ. ಸದ್ಯ ದಾಂಡೇಲಿಯ ಅರಣ್ಯ ಭಾಗದಲ್ಲಿ ಆನೆಗಳ ಹಿಂಡು ಸಂಚರಿಸುತ್ತಿದ್ದು, ಈ ಭಾಗದ ತೋಟ, ಕಬ್ಬಿನ ಗದ್ದೆಗಳಿಗೆ ನುಗ್ಗುತ್ತಿದೆ.
ಹಳಿಯಾಳ, ಯಲ್ಲಾಪುರ ಭಾಗದಲ್ಲೂ ಆನೆ ಹಾವಳಿ. ಇನ್ನು ಕೆಲವು ವರ್ಷಗಳ ಹಿಂದೆ ಹಳಿಯಾಳ ನಗರಕ್ಕೆ ಒಂಟಿ ಸಲಗವೊಂದು ಆಗಮಿಸಿ ನಗರವಾಸಿಗಳಿಗೆ ಶಾಕ್ ನೀಡಿತ್ತು. ಇದಲ್ಲದೇ ಕೆಲವು ತಿಂಗಳ ಹಿಂದೆ ಹಳಿಯಾಳ ಭಾಗದ ಕಬ್ಬಿನ ಗದ್ದೆಗಳಿಗೆ ನುಗ್ಗಿದ ಆನೆಗಳು ಕಬ್ಬು ಬೆಳೆಯನ್ನು ನಾಶ ಮಾಡಿತ್ತು. ನಂತರ ಅರಣ್ಯ ಇಲಾಖೆಯವರು ಆನೆಯನ್ನು ಓಡಿಸುವ ಕಾರ್ಯ ಮಾಡಿದ್ದರು