ಜಾರ್ಕೊಲ್ಲಿಯ ಜನನಿಬಿಡ ಪ್ರದೇಶದಲ್ಲೆ ಆನೆಗಳ ಅಲೆದಾಟ!

ಹೊಸದಿಗಂತ ವರದಿ, ಸುಂಟಿಕೊಪ್ಪ:
ಮಾದಾಪುರ ಜಾರ್‍ಕೊಲ್ಲಿ ಜನಬಿಡ ಪ್ರದೇಶ, ಕಾಫಿ ತೋಟದಲ್ಲಿ ಕಾಡಾನೆ ದಿಢೀರನೆ ಪ್ರತ್ಯಕ್ಷವಾಗಿದ್ದು ಜನವಲಯದಲ್ಲಿ ಅತಂಕ ಸೃಷ್ಟಿಸಿದೆ.
ಈ ವಲಯದಲ್ಲಿ ಕಾಡಾನೆಗಳು ಎಂದೂ ಕಂಡು ಬಂದಿರಲಿಲ್ಲ. ಆದರೆ ಇದೀಗ ರಾತ್ರಿ ವೇಳೆ ಜಾರ್‍ಕೊಲ್ಲಿ ಜನಬಿಡ ಪ್ರದೇಶದ ಆಸುಪಾಸಿನ ಕಾಫಿ ತೋಟಕ್ಕೆ ಕಾಡಾನೆಗಳು ನುಗ್ಗಿ ಬಾಳೆ,ತೆಂಗು, ಬೆಣ್ಣೆ ಹಣ್ಣಿನ ಗಿಡಗಳನ್ನು ತಿಂದು, ತುಳಿದು ನಾಶಪಡಿಸಿವೆ.
ಮಂಡೇಟಿರ ಮಂಜುನಾಥ ಅವರ ತೋಟಕ್ಕೂ ಲಗ್ಗೆಯಿಟ್ಟ ಕಾಡಾನೆಗಳು ಜನಬಿಡ ಪ್ರದೇಶದಲ್ಲೂ ಅಂಡಲೆದಿವೆ. ಇದರಿಂದ ಕಾರ್ಮಿಕರು ಸ್ಥಳೀಯ ವಾಸಿಗಳು ಭಯಭೀತರಾಗಿದ್ದಾರೆ. ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟುವ ಕೆಲಸವನ್ನು ಅರಣ್ಯಾಧಿಕಾರಿಗಳು ಮಾಡಬೇಕು ಎಂದು ಜಾರ್‍ಕೊಲ್ಲಿಯ ಮೆಕ್ಯಾನಿಕ್ ಸುರೇಶ, ಇಬ್ರಾಹಿಂ, ಸೈನು ಅವರು ಪತ್ರಿಕೆಯ ಮೂಲಕ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!