ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಕ್ಸ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಯುದ್ಧಪೀಡಿದ ಪ್ರದೇಶ ಇಸ್ರೇಲ್ಗೆ ಭೇಟಿ ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಲಾನ್ ಮಸ್ಕ್ಗೆ ಯುದ್ಧದ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಯಹೂದಿಗಳ ವಿರುದ್ಧದ ದ್ವೇಷದ ಪೋಸ್ಟ್ಗಳು ಹೆಚ್ಚಳವಾಗಿವೆ. ಈ ಆರೋಪದ ಹಿನ್ನೆಲೆ ಮಸ್ಕ್ ಇಸ್ರೇಲ್ಗೆ ಭೇಟಿ ನೀಡಿದ್ದಾರೆ.
ಇದೀಗ ಗಾಜಾ-ಇಸ್ರೇಲ್ ಸಂಘರ್ಷಕ್ಕೆ ನಾಲ್ಕು ದಿನಗಳ ತಾತ್ಕಾಲಿಕ ವಿರಾಮ ಘೋಷಿಸಲಾಗಿದೆ, ಈ ವಿರಾಮದಲ್ಲಿ ಮಸ್ಕ್ ಇಸ್ರೇಲ್ ಪ್ರಧಾನಿಯನ್ನು ಭೇಟಿಯಾಗಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಹಮಾಸ್ನಿಂದ ಹತ್ಯೆಗೀಡಾದವರ ಮನೆಗಳು, ಹಮಾಸ್ ಜೀವಂತವಾಗಿ ಸುಟ್ಟ ಕುಟುಂಬಗಳ ಮನೆಗಳನ್ನು ಮಸ್ಕ್ಗೆ ನೆತನ್ಯಾಹು ತೋರಿಸಿದ್ದಾರೆ. ಇದಾದ ನಂತರ ಸಂಕ್ಷಿಪ್ತ ಸಭೆ ನಡೆಸಿದ್ದು, ಜಾಗತಿಕ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.