Wednesday, February 28, 2024

ಇಸ್ರೇಲ್‌ನ ಯುದ್ಧಪೀಡಿತ ಪ್ರದೇಶಕ್ಕೆ ಎಲಾನ್ ಮಸ್ಕ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಕ್ಸ್ ಹಾಗೂ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಯುದ್ಧಪೀಡಿದ ಪ್ರದೇಶ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಲಾನ್ ಮಸ್ಕ್‌ಗೆ ಯುದ್ಧದ ಭೀಕರತೆಯನ್ನು ತೆರೆದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಯಹೂದಿಗಳ ವಿರುದ್ಧದ ದ್ವೇಷದ ಪೋಸ್ಟ್‌ಗಳು ಹೆಚ್ಚಳವಾಗಿವೆ. ಈ ಆರೋಪದ ಹಿನ್ನೆಲೆ ಮಸ್ಕ್ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.

Elon Musk visits Kfar Aza kibbutz with Israeli PM Netanyahuಇದೀಗ ಗಾಜಾ-ಇಸ್ರೇಲ್ ಸಂಘರ್ಷಕ್ಕೆ ನಾಲ್ಕು ದಿನಗಳ ತಾತ್ಕಾಲಿಕ ವಿರಾಮ ಘೋಷಿಸಲಾಗಿದೆ, ಈ ವಿರಾಮದಲ್ಲಿ ಮಸ್ಕ್ ಇಸ್ರೇಲ್ ಪ್ರಧಾನಿಯನ್ನು ಭೇಟಿಯಾಗಿ ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ.

Elon Musk visits Israel amid discussions on Starlink service in Gaza - CBS  Newsಹಮಾಸ್‌ನಿಂದ ಹತ್ಯೆಗೀಡಾದವರ ಮನೆಗಳು, ಹಮಾಸ್ ಜೀವಂತವಾಗಿ ಸುಟ್ಟ ಕುಟುಂಬಗಳ ಮನೆಗಳನ್ನು ಮಸ್ಕ್‌ಗೆ ನೆತನ್ಯಾಹು ತೋರಿಸಿದ್ದಾರೆ. ಇದಾದ ನಂತರ ಸಂಕ್ಷಿಪ್ತ ಸಭೆ ನಡೆಸಿದ್ದು, ಜಾಗತಿಕ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!