ಗ್ಯಾಸ್ಟ್ರಿಕ್ ಬಾಧೆಯಿಂದ ಬಳಲದವರೇ ಇಲ್ಲ, ಅಲ್ವಾ? ಹೆಚ್ಚು ತಿಂದರೆ ಗ್ಯಾಸ್ಟ್ರಿಕ್, ತಿನ್ನದಿದ್ದರೆ ಗ್ಯಾಸ್ಟ್ರಿಕ್, ಗ್ಯಾಸ್ ಸಮಸ್ಯೆಯಿಂದ ಸಾಕಷ್ಟು ಸನ್ನಿವೇಶಗಳಲ್ಲಿ ಮುಜುಗರ ಅನುಭವಿಸಬೇಕಾದ ಪರಿಸ್ಥಿತಿ ನಿಮಗೆ ಬಂದಿರಬಹುದು.. ಗ್ಯಾಸ್ನಿಂದ ದೂರ ಇರಲು ಹೀಗೆ ಮಾಡಿ..
ಗ್ಯಾಸ್ಟ್ರಿಕ್ ಇದೆ ಎಂದು ಗೊತ್ತಾಗೋದು ಹೇಗೆ?
- ಎದೆ ಉರಿ, ಆಸಿಡ್ ರಿಫ್ಲಕ್ಸ್
- ವಾಂತಿ ಬರುವಂತೆ ಆಗುವುದು
- ಹೊಟ್ಟೆ ಉಬ್ಬರ
- ಗ್ಯಾಸ್
- ಹುಳಿ ತೇಗು
- ಅತಿಯಾದ ಫಾರ್ಟಿಂಗ್
- ಬಾಯಿಯಿಂದ ದುರ್ವಾಸನೆ
- ಯಾವಾಗಲೂ ಬಿಕ್ಕಳಿಕೆ
ಇದನ್ನು ದೂರ ಇಡೋದು ಹೇಗೆ?
- ಸಿಕ್ಕಾಪಟ್ಟೆ ನೀರು ಕುಡೀರಿ
- ತಿಂದ ತಕ್ಷಣ ಮಲಗಬೇಡಿ
- ಶುಂಠಿ ಸೇವನೆ ಹೆಚ್ಚಿರಲಿ
- ಧೂಮಪಾನ, ಮದ್ಯಪಾನಕ್ಕೆ ಬ್ರೇಕ್ ಹಾಕಿ
- ಜೀರ್ಣವಾಗಲು ಕಷ್ಟ ಎನಿಸುವ ಆಹಾರವನ್ನು ತಿನ್ನೋದ್ಯಾಕೆ?
- ಸೋಡಾ ಉತ್ಪನ್ನಗಳಿಗೆ ಟಾಟಾ ಬೈ ಬೈ
- ಅಂಜೂರ ತಿನ್ನಿ
- ಅಲೋವೆರಾ ಜ್ಯೂಸ್ ಸೇವಿಸಿ
- ಅನ್ನ ತಿನ್ನೋಕೆ ಹಿಂದೆ ಮುಂದೆ ನೋಡೋದ್ಯಾಕೆ?
- ಎದ್ದ ತಕ್ಷಣ ಏನಾದರೂ ಸೇವಿಸಿ, ಖಾಲಿ ಹೊಟ್ಟೆ ಬೇಡ್ವೇ ಬೇಡ
- ಹೆಚ್ಚು ಮಸಾಲಾ ಪದಾರ್ಥ ಸೇವನೆ ಮಾಡಬೇಡಿ