ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ರಥಬೀದಿಯಲ್ಲಿ ಪ್ರಿವೆಡ್ಡಿಂಗ್ ಶೂಟ್ ಬ್ಯಾನ್ ಆಗಿದೆ. ಅನುಚಿತ ಮತ್ತು ಮುಜುಗರದ ವೀಡಿಯೊಗಳ ಚಿತ್ರೀಕರಣವನ್ನು ನಿಷೇಧಿಸುವ ನಿರ್ಧಾರವನ್ನು ಶ್ರೀಕೃಷ್ಣ ಮಠದ ಆಡಳಿತ ತೆಗೆದುಕೊಂಡಿದೆ.
ಅಷ್ಟಮಠದ ಯತಿಗಳು ಓಡಾಡುವ, ಭಕ್ತಿ ಶ್ರದ್ಧೆಯ ನೆಲೆಯಲ್ಲಿ ರಥೋತ್ಸವ ನಡೆಯುವ ಉಡುಪಿ ರಥಬೀದಿಯಲ್ಲಿ ಪ್ರಿ ವೆಡ್ಡಿಂಗ್, ಮದುವೆ ಬಳಿಕದ ಫೋಟೋ, ವಿಡಿಯೋ ಶೂಟ್‌ನ್ನು ಮಾಡುವಂತಿಲ್ಲ.
ಶ್ರೀಕೃಷ್ಣ ಮಠ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಪುರಾತನ ದೇವಸ್ಥಾನ, ಕನಕಗೋಪುರ, ಅಷ್ಟಮಠಗಳ ಎದುರು, ರಥಬೀದಿಯಲ್ಲಿ ಬೆಳಗ್ಗಿನಿಂದ ಮದುವೆಯಾಗಲಿರುವ ಜೋಡಿ ಶೂಟ್ ನಿರತವಾಗುತ್ತಿತ್ತು, ಸರಸ ಸಲ್ಲಾಪದಲ್ಲಿ ತೊಡಗುತ್ತಿತ್ತು. ಇದು ನೋಡುವವರಿಗೆ ಅನುಚಿತ ಹಾಗೂ ಮುಜುಗರ ಉಂಟು ಮಾಡುತ್ತಿತ್ತು.
ಭಕ್ತರಿಂದ ಬಂದ ದೂರುಗಳ ಆಧಾರದ ಮೇಲೆ, ಅನುಚಿತ ಮತ್ತು ಮುಜುಗರದ ವೀಡಿಯೊಗಳ ಚಿತ್ರೀಕರಣವನ್ನು ಅನುಮತಿಸದಿರಲು ಪುತ್ತಿಗೆ ಮಠವು ನಿರ್ಧರಿಸಿದೆ, ಇದು ಪ್ರಿ ವೆಡ್ಡಿಂಗ್ ಚಿತ್ರೀಕರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ.