ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೀತಿಗೆ ಯಾವ ಬೇಧವೂ ಇಲ್ಲ. ಪ್ರೀತಿ ಯಾರ ಮೇಲೆ, ಯಾವಾಗ, ಎಲ್ಲಿ ಆಗುತ್ತದೆ ಅನ್ನೋದಕ್ಕೆ ಯಾವ ರೂಲ್ಸ್ ಇಲ್ಲ. ಇಲ್ಲೊಬ್ಬ ಮಹಿಳೆ ಫ್ಯಾನ್ ರಿಪೇರಿ ಮಾಡಲು ಬಂದ ವ್ಯಕ್ತಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ.
ಹೌದು, ಬಿಹಾರದ ಯುವತಿಯೊಬ್ಬಳು ಸೀಲಿಂಗ್ ಫ್ಯಾನ್ ರಿಪೇರಿ ಮಾಡಲು ತನ್ನ ಮನೆಗೆ ಬಂದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ.
ಹೇಗಾಯ್ತು ಲವ್ ?
ಈ ಫ್ಯಾನ್ನಿಂದ ನಮ್ಮ ನಡುವೆ ಪ್ರೀತಿ ಹುಟ್ಟಿದೆ. ತನ್ನ ಮನೆಯಲ್ಲಿ ಫ್ಯಾನ್ ಕೆಲಸ ಮಾಡುತ್ತಿಲ್ಲ ಎಂದು ನಾನು ಕರೆ ಮಾಡಿ ಆತನಿಗೆ ಬರಹೇಳಿದೆ. ಆತ ಬಂದು ರಿಪೇರಿ ಮಾಡಿಕೊಟ್ಟಿದ್ದಾನೆ. ಆ ನಂತರ ನಾನು ಅವನ ಬಳಿ ನಂಬರ್ ಕೇಳಿದೆ. ಒಂದು ವೇಳೆ ಮತ್ತೆ ಫ್ಯಾನ್ ರಿಪೇರಿಗೆ ಬಂದರೆ ಕರೆ ಮಾಡಿ ಹೇಳಬಹುದಲ್ಲ ಎಂದು ನೆಪ ಹೇಳಿ ನಂಬರ್ ಪಡೆದೆ ಎಂದು ಮಹಿಳೆ ಹೇಳಿದ್ದಾರೆ.
ನನಗೆ ಆತನ ಮೇಲೆ ಮೊದಲಿನಿಂದಲ್ಲೂ ಪ್ರೀತಿ ಇತ್ತು. ಅದನ್ನು ಎಲ್ಲಿಯೂ ತೋರಿಸಲಿಲ್ಲ. ಅವನಿಲ್ಲದೆ ನನಗೆ ಯಾವುದರ ಮೇಲೂ ಗಮನ ಹರಿಸಲು ಆಗುತ್ತಿರಲಿಲ್ಲ. ಅಷ್ಟೊಂದು ಆತನನ್ನು ಪ್ರೀತಿಸುತ್ತಿದ್ದೇ. ಮೊದಲ ಮೊದಲಿಗೆ ಅವನು ತನ್ನ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಹೇಗಾದರೂ ಅವನನ್ನು ಮನೆ ಕರೆಸಿಕೊಳ್ಳಬೇಕು. ಏನಾದರೂ ಮಾಡಿ ಮಾತನಾಡಬೇಕು ಎಂದು ಅವಕಾಶಕ್ಕಾಗಿ ಕಾಯುತ್ತಿದ್ದೆ. ಫ್ಯಾನ್, ಲೈಟ್ ಅಥವಾ ಡಿಶ್ ಟೆಲಿವಿಷನ್ ರಿಪೇರಿ ಎಂದು ಆತನನ್ನು ಆಗಾಗ ಆತನ್ನು ಭೇಟಿ ಮಾಡುವ ಸಲುವಾಗಿ ಫೋನ್ ಮಾಡಿ ಮನೆಗೆ ಕೆರಸಿಕೊಳ್ಳುತ್ತಿದೆ. ನಂತರ ನಾವಿಬ್ಬರು ಮಾತನಾಡುತ್ತಿದ್ದೆವು. ಪ್ರೀತಿಸಿ ಮದುವೆಯಾದೆವು ಎಂದಿದ್ದಾರೆ.