ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿವಾಸುದೇವ್ ತುರ್ತು ಮೆದುಳು ಸರ್ಜರಿ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಮೆದಳಿನಲ್ಲಿ ರಕ್ತ ಸ್ರಾವವಾಗಿದೆ. ಜೊತೆಗೆ ಮೆದುಳಿನಲ್ಲಿ ಊತವಾಗಿದೆ. ತೀವ್ರ ನೋವಿನಿಂದ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾದ ಸದ್ಗುರುವಿನ ತಪಾಸಣೆ ನಡೆಸಿದ ವೈದ್ಯರು ತುರ್ತು ಮೆದುಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ದೇಶ ವಿದೇಶದಲ್ಲಿರುವ ಸದ್ಗುರು ಅನುಯಾಯಿಗಳು, ಶಿಷ್ಯರು, ಬೆಂಬಲಿಗರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.
ಕಳೆದ ಎರಡು ವಾರದಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲಿದ್ದರು. ಮಾರ್ಚ್ 14 ರಂದು ವೈದ್ಯ ವಿನಿತ್ ಸುರಿ ಸೂಚನೆ ಪ್ರಕಾರ ಎಂಆರ್‌ಐ ಸ್ಕ್ರಾನ್‌ಗೆ ಒಳಗಾಗಿದ್ದಾರೆ. ಈ ವೇಳೆ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸದ್ಗುರು ಮೆದುಳಿನಲ್ಲಿ ರಕ್ತಸ್ರಾವವಾಗಿ ಊದಿಕೊಂಡಿರುವುದು ಪತ್ತೆಯಾಗಿದೆ. ಮಾರ್ಚ್ 17ರಂದು ಸದ್ಗುರು ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇತ್ತ ಪ್ರಜ್ಞಾಹೀನರಾಗುತ್ತಾ ಬಂದ ಸದ್ಗುರು ತೀವ್ರ ತಲೆನೋವು ಹಾಗೂ ವಾಂತಿಯಿಂದ ಮತ್ತಷ್ಟು ಬಳಲಿದ್ದಾರೆ.
ಅಪೋಲೋ ವೈದ್ಯರಾದ ಡಾ ವಿನಿತ್ ಸುರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಹಾಗೂ ಡಾ. ಎಸ್ ಚಟರ್ಜಿ ನೇತೃತ್ವದ ತಂಡ ಸದ್ಗುರುವಿಗೆ ಮೆದಳು ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಬಲಿಕ ಸದ್ಗುರುವಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿದಿದೆ. ಇದೀಗ ಸದ್ಗುರು ನಿಧಾವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
Neurologist Dr. Vinit Suri of @HospitalsApollo gives an update about Sadhguru’s recent Brain Surgery. pic.twitter.com/07WzJ0gO0z
— Isha Foundation (@ishafoundation) March 20, 2024
ಸದ್ಗುರು ಆರೋಗ್ಯ ಅಪ್‌ಡೇಟ್ ಕುರಿತು ಅಪೋಲೋ ಆಸ್ಪತ್ರೆ ವೈದ್ಯರು ನೀಡಿದ ಮಾಹಿತಿಯನ್ನು ಇಶಾ ಫೌಂಡೇಶನ್ ಹಂಚಿಕೊಂಡಿದೆ. ಚಿಕಿತ್ಸೆ ಮುಂದುವರಿದಿದೆ. ಇದೀಗ ದೇಶಾದ್ಯಂತ ಸದ್ಗುರು ಅನುಯಾಯಿಗಳು ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಹಲವರು ಇಶಾ ಫೌಂಡೇಶನ್‌ಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.