ನಾನು ಈ ಜಿಲ್ಲೆಯ ಮಗಳು, ನನಗೆ ವೋಟ್ ಕೊಡಿ: ಗೀತಾ ಶಿವರಾಜ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಈ ಜಿಲ್ಲೆಗೆ ಮಗಳು. ನನಗೆ ವೋಟ್ ಕೊಡಲೇಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಕರೆ ನೀಡಿದ್ದಾರೆ.

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಮನೆಯ ಮಗಳನ್ನು ಬರಿಗೈಯಲ್ಲಿ ಕಳಿಸಲು ಆಗುವುದಿಲ್ಲ. ಲೋಕಸಭೆಯಲ್ಲಿ ಜಿಲ್ಲೆಯ ಧ್ವನಿ ಆಗಿ ಕೆಲಸ ಮಾಡುತ್ತೇನೆ. ನಿಮ್ಮ ಜೊತೆಗೆ ಇದ್ದೇ ಇರುತ್ತೇನೆ. ನಿಮ್ಮೆಲ್ಲರ ಸೇವೆಗೆ ಒಂದು ಅವಕಾಶ ಕೊಡಿ. ಶಿವಮೊಗ್ಗದಿಂದ ಲೋಕಸಭೆಗೆ ಹೋಗುವ ಮೊದಲ ಮಹಿಳೆ ಆಗುತ್ತೇನೆ. ಯಾರಿಗೂ ಯಾವುದೇ ಕೆಟ್ಟ ಹೆಸರು ತರುವುದಿಲ್ಲ ಎಂದು ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!