ಮೆಟರ್ನಿಟಿ ರಜೆ ನಂತರ ಉದ್ಯೋಗಿ ಮತ್ತೆ ಪ್ರೆಗ್ನೆಂಟ್‌: ಕೆಲಸದಿಂದ ತೆಗೆದ ಕಂಪನಿಗೆ ಭಾರೀ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆಟರ್ನಿಟಿ ರಜೆ ಮುಗಿಸಿ ಬಂದ ಫೀಮೇಲ್‌ ಎಂಪ್ಲಾಯಿ ಮತ್ತೆ ಪ್ರೆಗ್ನೆಂಟ್‌ ಎನ್ನುವ ಕಾರಣಕ್ಕೆ ಕಂಪನಿಯೊಂದು ಕೆಲಸದಿಂದ ತೆಗೆದಿದೆ! ವಿಷಯ ಕೋರ್ಟ್‌ವರೆಗೂ ಹೋಗಿದ್ದು, ಮಹಿಳೆಗೆ 31 ಲಕ್ಷ ರೂ. ಪರಿಹಾರ ನೀಡಿ ಎಂದು ಕೋರ್ಟ್‌ ಹೇಳಿದೆ.

ಈಗಷ್ಟೇ ಮೆಟರ್ನಿಟಿ ರಜೆ ಮುಗಿಸಿ ಬಂದ ಬೆನ್ನಲ್ಲೇ ಗರ್ಭಿಣಿಯಾಗಿರುವ ಮಹಿಳಾ ಉದ್ಯೋಗಿಯನ್ನು ಕಂಪನಿ ಆರ್ಥಿಕ ನಷ್ಟದ ಕಾರಣ ನೀಡಿ ವಜಾಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದ ಕಂಪನಿಗೆ ಉದ್ಯೋಗ ಟ್ರಿಬ್ಯನಲ್ ಬೋರ್ಡ್ ತಕ್ಕ ಶಾಸ್ತಿ ಮಾಡಿದೆ. ಮಹಿಳಾ ಉದ್ಯೋಗಿಗೆ 31 ಲಕ್ಷ ರೂಪಾಯಿ ದಂಡದ ರೂಪದಲ್ಲಿ ನೀಡುವಂತೆ ಆದೇಶಿಸಿದ ಘಟನೆ ಲಂಡನ್‌ನಲ್ಲಿ ನಡೆದಿದೆ.  ಯುಕೆಯಲ್ಲಿ ನೆಲೆಸಿರುವ ಭಾರತೀಯ ಮೂಲಕ ನಿಕಿತಾ ಟ್ವಿಚ್ಚನ್ ಮಹಿಳೆ ಮೊದಲ ಮಗುವಿನ ತಾಯಿಯಾಗಿದ್ದಾರೆ. ನಿಯಮ ಬದ್ಧವಾಗಿ ಕಂಪನಿಯಿಂದ ಮೆಟರ್ನಿಟಿ ರಜೆ ಪಡೆದುಕೊಂಡಿದ್ದಾರೆ. ಮೆಟರ್ನಿಟಿ ರಜೆ ಮುಗಿಸಿ ಕಚೇರಿಗೆ ಬಂದ  ನಿಕಿತಾ ಎರಡನೇ ಗುಡ್ ನ್ಯೂಸ್ ಕಚೇರಿಯಲ್ಲಿ ಹಂಚಿಕೊಂಡಿದ್ದಾರೆ.

ನಿಕಿತಾ ಮೆಟರ್ನಿಟಿ ರಜೆ ಮುಗಿಸಿ ಬಂದ ಬಳಿಕ ಕಂಪನಿ ಮೀಟಿಂಗ್ ನಡೆಸಿದೆ. ಮುಂದಿನ ಕೆಲಸ, ಟಾರ್ಗೆಟ್ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದೆ. ಇದೇ ವೇಳೆ ನಿಕಿತಾ ಮತ್ತೆ ಕೆಲಸಕ್ಕೆ ಹಾಜರಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಎಲ್ಲರಿಗೂ ಶುಭಹಾರೈಸಿದ್ದಾರೆ. ಇದೇ  ಮೀಟಿಂಗ್‌ನಲ್ಲಿ ನಿಕಿತಾ ತಮ್ಮ ಗುಡ್ ನ್ಯೂಸ್‌ನ್ನು ಬಾಸ್ ಹಾಗೂ ಇತರ ಹಿರಿಯ ಮ್ಯಾನೇಜರ್ ಜೊತೆ ಹಂಚಿಕೊಂಡಿದ್ದಾರೆ. ಅಲ್ಲೀವರೆಗೆ ಎಲ್ಲವೂ ಒಕೆ ಎನ್ನುವಂತಿದ್ದ ಮೀಟಿಂಗ್ ಒಂದೇ ಕ್ಷಣದಲ್ಲಿ ಬದಲಾಯಿತು.

ಹೀಗಾಗಿ ನಿಕಿತಾ ಉದ್ಯೋಗಿಗಳ ಟ್ರಿಬ್ಯುನಲ್‌ನಲ್ಲಿ ಕಂಪನಿ ನಿರ್ಧಾರ ಪ್ರಶ್ನಿಸಿದ್ದರು. ಇಮೇಲ್ ದಾಖಲೆ ಸೇರಿದಂತೆ ಇತರ ದಾಖಲೆ ನೀಡಲಾಗಿತ್ತು. ಟ್ರಿಬ್ಯುನಲ್ ಬೋರ್ಡ್ ಕಂಪನಿಯಿಂದ ಕೆಲ ದಾಖಲೆ ತರಿಸಿಕೊಂಡು ತನಿಖೆ ನಡೆಸಿ ಇದೀಗ ತೀರ್ಪು ನೀಡಿದೆ. ನಿಯಮ ಉಲ್ಲಂಘಿಸಿದ ಕಂಪನಿ, ನಿಕಿತಾಗೆ 31 ಲಕ್ಷ ರೂಪಾಯಿ ಪಾವತಿಸುವಂತೆ ಆದೇಶ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!