ಮೇಷ
ಕುಟುಂಬ ಸದಸ್ಯರ ಜತೆಗೆ ಭಿನ್ನಾಭಿಪ್ರಾಯ ಉಂಟಾದೀತು. ತಾಳ್ಮೆಯಿಂದ ನಡಕೊಳ್ಳಿ. ಆರೋಗ್ಯ ಸಮಸ್ಯೆ ಇದ್ದರೆ ಅದು ಇಂದು ಪರಿಹಾರ ಕಾಣಲಿದೆ.
ವೃಷಭ
ಸಣ್ಣ ವಿಷಯಗಳು ಮನಸ್ಸು ಕೊರೆಯುತ್ತವೆ. ಉದ್ದೇಶಿತ ಕೆಲಸವು ಸುಲಭದಲ್ಲಿ ಆಗದಿರುವ ಚಿಂತೆ. ಕ್ಷುಲ್ಲಕ ಕಾರಣಕ್ಕೆ ಚಿಂತಿಸುವುದು ನಿಲ್ಲಿಸಿರಿ. ತಾಳ್ಮೆಯಿಂದ ವರ್ತಿಸಿ.
ಮಿಥುನ
ನಿಮಗನಿಸಿದ್ದನ್ನು ಮಾಡಲು ನೀವಿಂದು ಸ್ವತಂತ್ರರು. ಏಕೆಂದರೆ ನಿಮ್ಮ ಉದ್ದೇಶಗಳೆಲ್ಲ ಇಂದು ನೆರವೇರುತ್ತದೆ. ಆಪ್ತ ಬಂಧುಗಳು ನಿಮ್ಮ ಜತೆ ನಿಲ್ಲುತ್ತಾರೆ.
ಕಟಕ
ಹಳೆಯ ಹೂಡಿಕೆ ಇಂದು ಫಲ ನೀಡುವ ಸಾಧ್ಯತೆಯಿದೆ. ಕುಟುಂಬದಲ್ಲಿ ಶುಭ ಕಾರ್ಯಕ್ರಮ. ಪ್ರೇಮಿಗಳ ಪಾಲಿಗೆ ಹೊಸ ಸಮಸ್ಯೆ ಸೃಷ್ಟಿ.
ಸಿಂಹ
ಉದ್ಯೋಗದಲ್ಲಿ ಕೆಲ ದಿನಗಳಿಂದ ನೀವು ಬಯಸಿದಂತೆ ಸಾಗುತ್ತಿಲ್ಲ. ಸಹಚರರ ಜತೆ ಹೊಂದಾಣಿಕೆ ಮುಖ್ಯ ಎಂಬುದನ್ನು ಅರಿತುಕೊಳ್ಳಿ.
ಕನ್ಯಾ
ಅನಿರೀಕ್ಷಿತ ಕ್ಷೇತ್ರದಿಂದ ಮೆಚ್ಚುಗೆ ಪಡೆಯುವಿರಿ. ವಾದಕ್ಕೆ ಇಳಿಯದಿರಿ. ಇತರರ ಅಭಿಪ್ರಾಯ ಮನ್ನಿಸಲು ಕಲಿಯಿರಿ. ಆರೋಗ್ಯದ ಕುರಿತು ಕಾಳಜಿ ವಹಿಸಿರಿ.
ತುಲಾ
ಪ್ರಮುಖ ಆರ್ಥಿಕ ವ್ಯವಹಾರವೊಂದು ಅಂತಿಮಗೊಳ್ಳಲಿದೆ. ಇತರರಿಗೆ ನೆರವು ನೀಡಲು ಹಿಂಜರಿಕೆ ಬೇಡ. ಅದು ನಿಮಗೂ ಒಳಿತು ತರಲಿದೆ.
ವೃಶ್ಚಿಕ
ಸಂಬಂಧದಲ್ಲಿ ನಿಧಾನ ಪ್ರಗತಿಯಿಂದ ಅಸಹನೆ. ತಾಳ್ಮೆ ವಹಿಸಿದರೆ ಪ್ರೀತಿಯ ಬದುಕು ಹೊಸ ಎತ್ತರ ತಲುಪಲಿದೆ. ಆರೋಗ್ಯ ಸುಸ್ಥಿರತೆ ಕಾಯ್ದುಕೊಳ್ಳಿ.
ಧನು
ಕಾಡುತ್ತಿದ್ದ ಮೈಕೈ ನೋವು ಇಂದು ನಿವಾರಣೆ ಆಗಲಿದೆ. ಹಾಗಾಗಿ ಮನಸ್ಸಿಗೆ ನಿರಾಳತೆ. ವೃತ್ತಿಯಲ್ಲಿ ಹೊಸ ಒತ್ತಡ ನಿಭಾಯಿಸಲು ಸಫಲರಾಗುವಿರಿ.
ಮಕರ
ಬಾಕಿ ಉಳಿದ ಕಾರ್ಯ ಇಂದು ಪೂರೈಸುವಿರಿ. ನಿಮ್ಮ ಕೆಲಸಕ್ಕೆ ಕೆಲವರಿಂದ ಅಡ್ಡಿ . ಆಪ್ತರೊಂದಿಗಿನ ವಿರಸವನ್ನು ಮುಂದುವರಿಸದಿರಿ.
ಕುಂಭ
ಯಾರಾದರೂ ನಿಮ್ಮಿಂದ ದೂರ ಸರಿದರೆ ಆ ಬಗ್ಗೆ ಭಾವುಕರಾಗದಿರಿ. ಅವರನ್ನು ಅವರ ಪಾಡಿಗೆ ಬಿಡಿ. ನಿಮ್ಮ ಆರೋಗ್ಯ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಿ.
ಮೀನ
ಕೇಳದೇ ಯಾರಿಗೂ ಸಲಹೆ ನೀಡಲು ಹೋಗದಿರಿ. ನೀವೇ ಇಕ್ಕಟ್ಟಿಗೆ ಸಿಲುಕಬಹುದು. ಪ್ರೀತಿಪಾತ್ರರ ಅನಿರೀಕ್ಷಿತ ಭೇಟಿ ಸಂಭವ.