ಟೀ ಎಸ್ಟೇಟ್ ಉದ್ಯೋಗಿಗಳಿಗೆ ದೀಪಾವಳಿ ಬೋನಸ್: ದುಬಾರಿ ಗಿಫ್ಟ್‌ ಕಂಡು ಕಾರ್ಮಿಕರು ಖುಷಿ ಖುಷಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಳಕಿನ ಹಬ್ಬಕ್ಕೆ ಕಾರ್ಮಿಕ ವರ್ಗಕ್ಕೆ ಮಾಲೀಕರು ಏನಾದರೂ ಉಡುಗೊರೆ ನೀಡಿ, ಅವರ ಬದುಕಿನಲ್ಲಿ ಮತ್ತಷ್ಟು ಬೆಳಕನ್ನು ತುಂಬುವ ಕೆಲಸ ಮಾಡುತ್ತಾರೆ. ಈ ಹಬ್ಬವನ್ನು ಮತ್ತಷ್ಟು ವಿಶೇಷವಾಗಿಸಲು ಫಾರ್ಮಾಸ್ಯುಟಿಕಲ್‌ ಕಂಪನಿಯೊಂದು ತಮ್ಮ ಕಾರ್ಮಿಕರಿಗೆ ಕಾರ್‌ ನೀಡಿತ್ತು. ಇದೀಗ ಟೀ ಕಂಪನಿಯ ಮಾಲೀಕರೊಬ್ಬರು ತಮ್ಮ ಉದ್ಯೋಗಿಗಳಿಗೆ ದುಬಾರಿ ಬೈಕ್‌ ಗಿಫ್ಟ್‌ ಕೊಟ್ಟು ಅವರನ್ನು ಸಂತೋಷಪಡಿಸಿದ್ದಾರೆ.

ತಮಿಳುನಾಡಿನ ಕೋಟಗಿರಿ ಪಟ್ಟಣದ ಟೀ ಎಸ್ಟೇಟ್ ಮಾಲೀಕ ಪಿ.ಶಿವಕುಮಾರ್ ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ಆಗಿ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ನೀಡಿದ್ದಾರೆ. ಅಷ್ಟೆ ಅಲ್ಲ, ಅವರೊಂದಿಗೆ ರೈಡ್‌ಗೆ ತೆರಳಿ ಸಂಸತ ಹಂಚಿಕೊಂಡರು. ಸುಮಾರು ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಬೈಕ್‌ಗಳನ್ನು ನೀಡಿ ಅವರ ಮುಖದಲ್ಲಿ ಸಂತೋಷ ಕಂಡರು.

ಕಂಪನಿಯ ಮ್ಯಾನೇಜರ್, ಮೇಲ್ವಿಚಾರಕರು, ಸ್ಟೋರ್ ಕೀಪರ್, ಕ್ಯಾಷಿಯರ್, ಕ್ಷೇತ್ರ ಸಿಬ್ಬಂದಿ, ಚಾಲಕರು ಸೇರಿದಂತೆ 15 ಉದ್ಯೋಗಿಗಳಿಗೆ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ಟೀ ಎಸ್ಟೇಟ್ ಅಭಿವೃದ್ಧಿಗೆ ಶ್ರಮಿಸಿದವರಿಗೆ ಹೊಸ ಬೈಕ್ ನೀಡುವ ಜತೆಗೆ ನ.12ರಂದು ಎಸ್ಟೇಟ್‌ನಲ್ಲಿ ದೀಪಾವಳಿ ಆಚರಿಸುತ್ತಿರುವುದಾಗಿ ಶಿವಕುಮಾರ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!