Sunday, December 3, 2023

Latest Posts

CRIME| ಹ್ಯಾಂಬರ್ಗ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ, ವಿಮಾನಗಳ ಹಾರಾಟ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿರುವ ಘಟನೆ ಜರ್ಮನಿಯ ಹ್ಯಾಂಬರ್ಗ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಿಂದಾಗಿ ಪ್ರಸ್ತುತ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಭದ್ರತಾ ಅಡೆತಡೆಗಳನ್ನು ಮುರಿದು ಕಾರಿನಲ್ಲಿ ಟರ್ಮಿನಲ್ ಒಂದನ್ನು ಪ್ರವೇಶಿಸಿದ ವ್ಯಕ್ತಿಯೊಬ್ಬ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾನೆ. ಶನಿವಾರ ರಾತ್ರಿ ಎಂಟು ಗಂಟೆಗೆ ನಡೆದ ಈ ಘಟನೆ ಎಲ್ಲರನ್ನೂ ದಿಗ್ಬ್ರಾಂತರನ್ನಾಗಿ ಮಾಡಿದೆ.

ಕಾರಿನಲ್ಲಿ ವ್ಯಕ್ತಿಯ ಜೊತೆಗೆ ಇಬ್ಬರು ಮಕ್ಕಳಿದ್ದರು ಎನ್ನಲಾಗಿದೆ. ಘಟನೆಯಿಂದಾಗಿ ಪ್ರಸ್ತುತ ವಿಮಾನ ನಿಲ್ದಾಣದಿಂದ ಯಾವುದೇ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಖಚಿತಪಡಿಸಿದೆ. ಇದರಿಂದಾಗಿ 27 ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಭಾರೀ ಪೊಲೀಸ್ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಹ್ಯಾಂಬರ್ಗ್ ಪೊಲೀಸರು ಟ್ವೀಟ್‌ ಮಾಡಿದ್ದು, ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿದರು. ಗುಂಡಿನ ದಾಳಿ ಬಳಿಕ ಆ ವ್ಯಕ್ತಿ ಬೆಂಕಿಯಿಂದ ಉರಿಯುತ್ತಿದ್ದ ಎರಡು ಬಾಟಲಿಗಳನ್ನು ಎಸೆದಿದ್ದಾನೆ. ಇದರಿಂದ ವಿಮಾನ ನಿಲ್ದಾಣದ ಕೆಲವೆಡೆ ಬೆಂಕಿ ಕಾಣಿಸಿಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!