ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ನ ರಾಮಗಢ ಜಿಲ್ಲೆಯ ಹುಲು ಗ್ರಾಮದಲ್ಲಿ ಕಂದಕಕ್ಕೆ ಬಿದ್ದ ಆನೆಯನ್ನು ರಕ್ಷಣೆ ಮಾಡಲಾಗಿದೆ. ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದಿ, ಆಹಾರ ಅರಸಿ ನಾಡಿಗೆ ಬಂದ ದೈತ್ಯ ಸಲಗ ಕತ್ತಲೆಯಲ್ಲಿ ಕಾಣದೆ ಕಂದಕಕ್ಕೆ ಬಿದ್ದಿದೆ. ಕೂಡಲೇ ವಿಚಾರವನ್ನು ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಯಂತ್ರದ ಸಹಾಯದಿಂದ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂತರ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರು ಬೆಂಕಿ ಹಚ್ಚಿ, ಪಟಾಕಿ ಸಿಡಿಸುತ್ತಾ ಆನೆಯನ್ನು ಕಾಡಿನತ್ತ ಓಡಿಸಿದರು.
#WATCH Local administration with the help of an excavator machine yesterday rescued an elephant after it fell into a ditch in Hulu village of Ramgarh district in Jharkhand pic.twitter.com/4uzdY31KaR
— ANI (@ANI) June 27, 2022
ಜಾರ್ಖಂಡ್ನ ರಾಮಗಢ ಜಿಲ್ಲೆಯ ಗೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಅಟ್ಟಹಾಸ ಸೃಷ್ಟಿಸಿವೆ. ಈ ಪ್ರದೇಶದಲ್ಲಿ ಆನೆಗಳ ಹಿಂಡು ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಪ್ರಾಣಹಾನಿ, ಆಸ್ತಿ-ಪಾಸ್ತಿ ನಷ್ಟದಿಂದ ಜನ ಭಯಭೀತರಾಗಿದ್ದಾರೆ.