Friday, January 9, 2026

ರಾಜಸ್ಥಾನದ ಗುರುಗ್ರಾಮದಲ್ಲಿ ಎನ್​ಕೌಂಟರ್: ಮೋಸ್ಟ್ ವಾಂಟೆಡ್ ಕ್ರಿಮಿನಲ್ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ಗುರುಗ್ರಾಮ ಮತ್ತು ನುಹ್ ಪೊಲೀಸರ ಜಂಟಿ ತಂಡವು ನಡೆಸಿದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಅಂತಾ ​ರಾಜ್ಯ ಅಪರಾಧಿ ಬಂಧನವಾಗಿದೆ.

ಹಲವು ರಾಜ್ಯಗಳಿಗೆ ಬೇಕಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.

ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, 50 ವರ್ಷದ ಅಪರಾಧಿ ಯಾದ್ ರಾಮ್ ಎಂಬುವವರು ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಾದ್ಯಂತ ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ ಸುಮಾರು 2 ಡಜನ್ ಅಪರಾಧಗಳನ್ನು ಮಾಡಿದ್ದಾನೆ.

ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಮೂಲದ ರಾಮ್ ರಾಜಸ್ಥಾನದ ಜೈಪುರದಲ್ಲಿ ವಾಸಿಸುತ್ತಿದ್ದ. ಭಾನುವಾರ ರಾತ್ರಿ ಸೋಹ್ನಾ ಕಡೆಗೆ ನಂಬರ್ ಪ್ಲೇಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿರುವುದನ್ನು ಪೊಲೀಸರು ನೋಡಿದ ನಂತರ ಆತನನ್ನು ಬಂಧಿಸಲಾಗಿದೆ ಎಂದು ಗುರುಗ್ರಾಮದ ಪೊಲೀಸರು ತಿಳಿಸಿದ್ದಾರೆ.

ಬೈಕ್ ಚಲಾಯಿಸುವಾಗ ಆತ ಶಸ್ತ್ರಾಸ್ತ್ರಗಳನ್ನು ಸಹ ಹೊಂದಿದ್ದ. ಆತನ ಸುಳಿವಿನ ಮಾಹಿತಿಯ ಮೇರೆಗೆ ಗುರುಗ್ರಾಮ ಪೊಲೀಸ್ ಮತ್ತು ಅಪರಾಧ ತನಿಖಾ ಸಂಸ್ಥೆ ನುಹ್ ತಂಡವು ಸೋಹ್ನಾ-ಗುರುಗ್ರಾಮ ರಸ್ತೆಯ ಮಹೇಂದ್ರವಾಡ ಕಚ್ಛಾ ರಾಸ್ತಾ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿತ್ತು. ನಿನ್ನೆ ರಾತ್ರಿ 10.15ರ ಸುಮಾರಿಗೆ ಆತನನ್ನು ತಡೆಯಲು ಪ್ರಯತ್ನಿಸಲಾಯಿತು. ಆದರೆ, ತಕ್ಷಣ ಎಚ್ಚೆತ್ತುಕೊಂಡ ಆತ ಪೊಲೀಸ್ ತಂಡದ ಮೇಲೆ ಮನಬಂದಂತೆ ಗುಂಡು ಹಾರಿಸಿದ. ಪೊಲೀಸರು ಪ್ರತಿದಾಳಿ ನಡೆಸಿ ಆತನ ಎರಡೂ ಕಾಲುಗಳಿಗೆ ಗುಂಡು ಹಾರಿಸಿದರು. ಗುಂಡು ತಗುಲಿ ಆತ ಕೆಳಗೆ ಬಿದ್ದ ನಂತರ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿದರು.

ಆ ಸ್ಥಳದಿಂದ ಒಂದು ಬೈಕ್, ಎರಡು ಅಕ್ರಮ ಪಿಸ್ತೂಲ್‌ಗಳು, 9 ಖಾಲಿ ಕಾರ್ಟ್ರಿಡ್ಜ್‌ಗಳು ಮತ್ತು 2 ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

error: Content is protected !!