July 6, 2026
Monday, July 6, 2026
spot_img

ಎಲ್ಲಿ ಆರಂಭವೋ ಅಲ್ಲೇ ಅಂತ್ಯ: ಫುಟ್‌ಬಾಲ್ ಲೋಕದ ಮಾಂತ್ರಿಕ ನೆಯ್ಮಾರ್ ನಿವೃತ್ತಿ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್ ಜಗತ್ತಿನ ಕಣ್ಮಣಿ, ಬ್ರೆಝಿಲಿಯನ್ ಶೈಲಿಯ ಮಾಂತ್ರಿಕ ಆಟಗಾರ ನೆಯ್ಮಾರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಿದ್ದಾರೆ. 2026ರ ಫಿಫಾ ವಿಶ್ವಕಪ್‌ನ ಪ್ರಿಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆ ವಿರುದ್ಧ ಬ್ರೆಝಿಲ್ 2-1 ಗೋಲುಗಳಿಂದ ಆಘಾತಕಾರಿ ಸೋಲು ಕಾಣುತ್ತಿದ್ದಂತೆ, 34 ವರ್ಷದ ನೆಯ್ಮಾರ್ ತಮ್ಮ 16 ವರ್ಷಗಳ ಸುದೀರ್ಘ ಕ್ರೀಡಾ ಜೀವನಕ್ಕೆ ಕಣ್ಣೀರಿನ ಮುಕ್ತಾಯ ಹಾಡಿದ್ದಾರೆ.

ನ್ಯೂಜೆರ್ಸಿಯಲ್ಲೇ ಆರಂಭ, ಅಲ್ಲೇ ಅಂತ್ಯ!

ವಿಶೇಷವೆಂದರೆ, ನೆಯ್ಮಾರ್ 2010ರಲ್ಲಿ ಅಮೆರಿಕದ ನ್ಯೂಜೆರ್ಸಿಯ ‘ಮೆಟ್‌ಲೈಫ್ ಸ್ಟೇಡಿಯಂ’ನಲ್ಲಿ ಅಮೆರಿಕ ವಿರುದ್ಧ ಆಡುವ ಮೂಲಕ ಅಂತರರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದರು. ಇದೀಗ ಅದೇ ಕ್ರೀಡಾಂಗಣದಲ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿ ನಿರ್ಗಮಿಸಿದ್ದಾರೆ. “ದೇಶಕ್ಕಾಗಿ ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಗಲಿಲ್ಲ. ಎಲ್ಲಿ ನನ್ನ ಪಯಣ ಆರಂಭವಾಗಿತ್ತೋ, ಇಲ್ಲೇ ಕೊನೆಯಾಗಿದೆ” ಎಂದು ಅವರು ಭಾವುಕರಾಗಿ ನುಡಿದರು.

ಪೀಲೆ ದಾಖಲೆ ಮುರಿದ ಸಾಂಬಾ ನಾಯಕ

ಬ್ರೆಝಿಲ್ ಫುಟ್‌ಬಾಲ್ ಇತಿಹಾಸದಲ್ಲಿ ನೆಯ್ಮಾರ್ ಸಾರ್ವಕಾಲಿಕ ಶ್ರೇಷ್ಠ ಸಾಧಕನಾಗಿ ಹೊರನಡೆದಿದ್ದಾರೆ. ಬ್ರೆಝಿಲ್ ಪರ ಒಟ್ಟು 130 ಪಂದ್ಯಗಳನ್ನಾಡಿರುವ ಅವರು 80 ಗೋಲುಗಳನ್ನು ಬಾರಿಸುವ ಮೂಲಕ, ದಿಗ್ಗಜ ಆಟಗಾರ ಪೀಲೆ (77 ಗೋಲು) ಅವರ ಹೆಸರಲ್ಲಿದ್ದ ದೀರ್ಘಕಾಲದ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ. ಈ ಮೂಲಕ ಬ್ರೆಝಿಲ್‌ನ ಸಾರ್ವಕಾಲಿಕ ಗರಿಷ್ಠ ಗೋಲು ಸರದಾರ ಎಂಬ ಹೆಗ್ಗಳಿಕೆಯೊಂದಿಗೆ ಮೈದಾನದಿಂದ ಹೊರನಡೆದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !