Friday, June 9, 2023

Latest Posts

ನೀತಿ ಸಂಹಿತೆ ಜಾರಿ: ಕಲಬುರಗಿಯಲ್ಲಿ ಬರೋಬ್ಬರಿ 35 ಲಕ್ಷ ರೂ. ಜಪ್ತಿ

ಹೊಸದಿಗಂತ ವರದಿ ಕಲಬುರಗಿ:

ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ,ತೆಲಂಗಾಣದಿಂದ ಕಲಬುರಗಿ ಕಡೆಗೆ ಸಾಗಿಸುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ತೆಲಂಗಾಣ ರಾಜ್ಯದಿಂದ ಕಲಬುರಗಿ ಕಡೆಗೆ ಸಾಗಿಸುತ್ತಿದ್ದ 35,50,000 ಹಣವನ್ನು ಕಲಬುರಗಿ-ತೆಲಂಗಾಣದ ರಿಬ್ಬನಪಲ್ಲಿ ಇಂಟರ್ ಸ್ಟೇಟ್ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಮೂವರನ್ನು ಪೋಲಿಸರು ವಿಚಾರಣೆ ನಡೆಸುತ್ತಿದ್ದು,ಬಂಧಿತರು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಪಂಚರಾಲಾ ಗ್ರಾಮದ ನಿವಾಸಿಗಳಾದ ದೇವೇಂದ್ರ ರೆಡ್ಡಿ, ಮಲ್ಲೇಶ್ ಹಾಗೂ ದಯಾಕರ್ ರೆಡ್ಡಿ ಎನ್ನುವವರು ಅಕ್ರಮವಾಗಿ ಹಣ ಸಾಗಿ‌ಸುತ್ತಿದ್ದವರು ಎಂದು ತಿಳಿದು ಬಂದಿದೆ.

ಅಕ್ರಮವಾಗಿ ಹಣವನ್ನು ಸಾಗಿಸುತ್ತಿದ್ದ ಬಂಧಿತರ ವಿಚಾರಣೆಯನ್ನು ಪೋಲಿಸರು ನಡೆಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!