ಟೆಸ್ಟ್‌ ಕ್ರಿಕೆಟ್‌ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ವೇಗಿ ಜೇಮ್ಸ್‌ ಆಂಡರ್‌ಸನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ ವಿಶ್ವದಾಖಲೆ ಬರೆದಿದ್ದಾರೆ.
ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಮೈಲುಗಲ್ಲು ತಲುಪಿದ್ದಾರೆ. ಜೊತೆಗೆ ಟೆಸ್ಟ್‌ ನಲ್ಲಿ ಅತಿಹೆಚ್ಚು ವಿಕೆಟ್‌ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಕಿವೀಸ್ ಸ್ಟ್ಯಾಂಡ್-ಬೈ ನಾಯಕ ಡೆವೊನ್ ಕಾನ್ವೇ ವಿಕೆಟ್ ಪಡೆದ ಆಂಡರ್ಸನ್ ಈ ಮೈಲಿಗಲ್ಲನ್ನು ತಲುಪಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 650 ವಿಕೆಟ್‌ಗಳ ಗಡಿಯನ್ನು ತಲುಪಿದ ಇತಿಹಾಸದಲ್ಲಿ ಮೂರನೇ ಬೌಲರ್ ಆಗಿದ್ದಾರೆ. ಶ್ರೀಲಂಕಾದ ಸ್ಪಿನ್ ದಂತಕಥೆ- ಆಫ್-ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ (800) ಮತ್ತು ಶೇನ್ ವಾರ್ನ್(708) ನಂತರದ ಸ್ಥಾನದಲ್ಲಿ ಆಂಡರ್ಸನ್ ಇದ್ದಾರೆ. ಭಾರತೀಯ ಲೆಜೆಂಡರಿ ಕ್ರಿಕೆಟಿಗ ಅನಿಲ್ ಕುಂಬ್ಳೆ 619 ವಿಕೆಟ್‌ ಗಳೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅತಿಹೆಚ್ಚು ವಿಕೆಟ್‌ ಪಡೆದ ವೇಗಿಗಳ ಲೀಸ್ಟ್‌ ನಲ್ಲಿ ಅಂಡರ್‌ ಸನ್‌ ಅಗ್ರಸ್ಥಾನ್ನೇರಿದ್ದು, ಗ್ಲೆನ್ ಮೆಕ್‌ಗ್ರಾತ್‌ 563 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಟೆಸ್ಟ್ ವಿಕೆಟ್‌ ಪಡೆದ ವೇಗಿಗಳು:
650 – ಜೇಮ್ಸ್ ಆಂಡರ್ಸನ್
563 – ಗ್ಲೆನ್ ಮೆಕ್‌ಗ್ರಾತ್
543 – ಸ್ಟುವರ್ಟ್ ಬ್ರಾಡ್
519 – ಕರ್ಟ್ನಿ ವಾಲ್ಷ್
439 – ಡೇಲ್ ಸ್ಟೇಯ್ನ್
434 – ಕಪಿಲ್ ದೇವ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!