ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಬೃಹತ್ ಮೊತ್ತ ನೋಡಿ ಬೆಚ್ಚಿದ್ದ ಇಂಗ್ಲೆಂಡ್ 10.3 ಓವರ್‌ಗಳಲ್ಲಿ ಕೇವಲ 97 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ 5ನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಬರೋಬ್ಬರಿ 150 ರನ್ ಗೆಲುವು ಕಂಡಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
ಭಾರತ 247 ರನ್ ಸಿಡಿಸಿದ್ದರೆ, ಇಂಗ್ಲೆಂಡ್ 97 ರನ್ ಸಿಡಿಸಿ ಆಲೌಟ್ ಆಗಿದೆ.
ಚೇಸಿಂಗ್ ಇಳಿದ ಇಂಗ್ಲೆಂಡ್ ತಂಡಕ್ಕೆ ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಶಿವಂ ದುಬೆ ಹಾಗೂ ಅಭಿಷೇಕ್ ಶರ್ಮಾ ದಾಳಿ ಕಗ್ಗಂಟಾಯಿತು. ಶಮಿ 3 ವಿಕೆಟ್ ಕಬಳಿಸಿದರೆ ವರುಣ್, ಶಿವಂ, ಅಭಿಷೇಕ್ ತಲಾ 2 ವಿಕೆಟ್ ಪಡೆದರು. ಬಿಷ್ಣೋಯ್ 1 ವಿಕೆಟ್ ಕಬಳಿಸಿದರು.