Friday, December 8, 2023

Latest Posts

RECIPE| ಮಳೆಗೆ ಹಿತವಾದ ಬಿಸಿ ಬಿಸಿ ಈರುಳ್ಳಿ ಸೂಪ್ ಸವಿಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮತ್ತೆ ಮಳೆಯಾಗಿದೆ… ಮಳೆಗೆ ಹಿತವಾದ ಬಿಸಿ ಬಿಸಿ ಸೂಪ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಾಗಾದ್ರೆ ಡಿಫರಂಟ್ ಆಗಿರೋ ಟೇಸ್ಟಿ ಸೂಪ್ ರೆಸಿಪಿ ಇಲ್ಲಿದೆ. ನೀವೂ ಟ್ರೈ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು: ದೊಡ್ಡ ಗಾತ್ರದ ಮೂರು ನೀರುಳ್ಳಿ. ಸಾಧಾರಣ ಗಾತ್ರದ ಕಲ್ಲು ಸಕ್ಕರೆ 1, ಕರಿಮೆಣಸಿನ ಹುಡಿ 1 ಸ್ಪೂನ್, ನೀರು 2 ಕಪ್, ತುಪ್ಪ ಒಂದು ಸ್ಪೂನ್, ರುಚಿಗೆ ಬೇಕಾದಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ನೀರುಳ್ಳಿಯ ಸಿಪ್ಪೆ ತೆಗೆದು ತೊಳೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕಲ್ಲು ಸಕ್ಕರೆಯನ್ನು ಪುಡಿಮಾಡಿ ಒಂದು ಟೀ ಸ್ಪೂನ್ ಪ್ರತ್ಯೇಕ ತೆಗೆದಿಟ್ಟುಕೊಳ್ಳಿ. ಬಾಣಲೆಯನ್ನು ಬಿಸಿಗಿಟ್ಟು ಸಣ್ಣಗೆ ಹೆಚ್ಚಿದ ನೀರುಳ್ಳಿಯನ್ನು ಹೊಂಬಣ್ಣಕ್ಕೆ ಬರುವ ತನಕ ತುಪ್ಪದಲ್ಲಿ ಫ್ರೈಮಾಡಿ. ನಂತರ ನೀರು ಸೇರಿಸಿ, ಕಲ್ಲು ಸಕ್ಕರೆ ಪುಡಿ ಹಾಗು ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ ಸರಿಯಾಗಿ ಕುದಿಸಿರಿ. ಕಲ್ಲು ಸಕ್ಕರೆ ಸರಿಯಾಗಿ ಕರಗಿದ ನಂತರ ಒಲೆಯಿಂದ ಕೆಳಗಿಳಿಸಿಕೊಳ್ಳಿ. ಸರ್ವಿಂಗ್ ಬೌಲ್‍ಗೆ ಹಾಕಿ ಮೇಲ್ಭಾಗದಲ್ಲಿ ಕರಿಮೆಣಿಸ ಪುಡಿ ಉದುರಿಸಿ. ಬಿಸಿ ಬಿಸಿ ಈರುಳ್ಳಿ ಸೂಪ್ ಸೂಪರ್ ಆಗಿರುತ್ತದೆ. ಶೀತ ಹವೆಯಲ್ಲಿ ಈ ಸೂಪ್ ಆರೋಗ್ಯ ದೃಷ್ಠಿಯಿಂದಲೂ ಉತ್ತಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!