ಖುದ್ದು ನಾನೇ ಬಂದ್ರೂ ಉದ್ಯಾನದ ಒಳಕ್ಕೆ ಬಿಡಬೇಡಿ: ಚೀತಾ ಮಿತ್ರರಿಗೆ ಪ್ರಧಾನಿ ‘ಹುಕುಂ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಸೇರಿರುವ ಎಂಟು ಚೀತಾಗಳು ಹೊಸ ಜಾಗಕ್ಕೆ ಹೊಂದಿಕೊಳ್ಳುವ ತನಕ ಯಾರನ್ನೂ ಒಳಕ್ಕೆ ಬಿಡದಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹುಕುಂ ಮಾಡಿದ್ದಾರೆ.

ಚೀತಾ ಮಿತ್ರರೊಂದಿಗೆ ಸಮಾಲೋಚನೆ ನಡೆಸಿದ ಅವರು, ಎಲ್ಲ ಸಿಬ್ಬಂದಿಗಳನ್ನು ಮುಂದೆ ಕೂರಿಸಿ ಅವರೊಂದಿಗೆ ಕೆಲಕಾಲ ಕುಶಲೋಪರಿ ನಡೆಸಿದರು. ಈ ದೃಶ್ಯಾವಳಿ ಮೇಸ್ಟ್ರು ಶಿಷ್ಯಂದಿರಿಗೆ ಪಾಠ ಹೇಳಿಕೊಡುವ ಸಂದರ್ಭವನ್ನು ನೆನಪಿಸಿತು.

ಹೊಸ ಸ್ಥಳಕ್ಕೆ ಹೊಂದಿಕೊಳ್ಳಲು ಚೀತಾಗಳಿಗೆ ಸಮಯ ಅಗತ್ಯ. ಇದು ನಿಮಗೆ ತಿಳಿದಿರಬೇಕು. ರಾಜಕೀಯ ನಾಯಕರು, ಮಾಧ್ಯಮದವರು, ಅಧಿಕಾರಿಗಳು, ಸಂಬಂಧಿಕರು ಎಂದು ಎಲ್ಲರೂ ಇಲ್ಲಿಗೆ ಕಾಲಿಡುವ ಸಾಧ್ಯತೆ ಇದೆ. ಎಲ್ಲರಿಗೂ ಉದ್ಯಾನದೊಳಗೆ ಪ್ರವೇಶ ನಿರಾಕರಿಸುವುದು ನಿಮ್ಮ ಕರ್ತವ್ಯ. ಒಂದು ವೇಳೆ ನಾನು ಅಥವಾ ನನ್ನ ಸಂಬಂಧಿಕರು ಬಂದರೂ, ಉದ್ಯಾನದೊಳಕ್ಕೆ ಪ್ರವೇಶ ನಿರಾಕರಿಸಿ ಎಂದು ಅವರು ಕಿವಿಮಾತು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!