ಮಹಾರಾಷ್ಟ್ರಕ್ಕೆ ಕೋವಿಡ್ ರೂಪಾಂತರಿಯ ಎಂಟ್ರಿ: ರಾಜ್ಯಕ್ಕೆ ಮತ್ತೆ ಅಂತಕ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋವಿಡ್ ಓಮಿಕ್ರಾನ್‌ನ ಹೊಸ ರೂಪಾಂತರ ತಳಿ ಬಿಕ್ಯೂ.1 ಮಹಾರಾಷ್ಟ್ರದಲ್ಲಿ ಪತ್ತೆಯಾಗಿದೆ. ಈ ಬೆಳವಣಿಗೆ ಬೆನ್ನಿಗೇ ಹೈ ಅಲಟ್೯ ಇರುವಂತೆ ಆರೋಗ್ಯ ಇಲಾಖೆ ನಾಗರಿಕರಿಗೆ ಸೂಚಿಸಿದೆ. ಈ ಸಂಬಂಧ ಕೋವಿಡ್ ಮಾದರಿಯ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ಗೆ ಒಳಗಾಗುವಂತೆ ರಾಜ್ಯ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ರೂಪಾಂತರ ತಳಿ‌ ಅಪಾಯಕಾರಿಯಾಗಿದ್ದು, ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ಉಸಿರಾಟದ ಸಮಸ್ಯೆ ಹೊಂದಿರುವವರು ಎಚ್ಚರ ವಹಿಸಬೇಕು. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಹತ್ತಿರದ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಿ ಫಲಿತಾಂಶ ಪಡೆಯಬೇಕು. ಫಲಿತಾಂಶ ಬರುವವರೆಗೂ ಸ್ವಂಯ ಪ್ರತ್ಯೇಕವಾಸ ಇರಬೇಕು‌ ಎಂದು ಇಲಾಖೆ ಸೂಚಿಸಿದೆ.

ಇನ್ನು ಕೋವಿಡ್ ನಿಯಮಗಳ‌ ಪಾಲನೆ, ಮಾಸ್ಕ್ ಧಾರಣೆ, ಸಮಾಜಿಕ ಅಂತರ ಪಾಲನೆ ಅನುಸರಿಸುವಂತೆಯೂ ಇಲಾಖೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!