ಪರಿಸರ, ಸಂಸ್ಕೃತಿ, ಕೃಷಿ, ನದಿ-ಬೆಟ್ಟ, ಅರಣ್ಯ: ಶಿವಮೊಗ್ಗದ ಕಣ ಕಣವನ್ನು ಸ್ಮರಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು(ಫೆ.27) ಶಿವಮೊಗ್ಗದಲ್ಲಿ ಎರಡನೇ ದೊಡ್ಡ ವಿಮಾನ ನಿಲ್ದಾಣವನ್ನು (Shivamogga Airport) ಲೋಕಾರ್ಪಣೆ ಮಾಡಿದರು.

ಬಳಿಕ ಸಮಾವೇಶದಲ್ಲಿ ಮಾತನಾಡಿದ ಮೋದಿ, ಶಿವಮೊಗ್ಗ ಜಿಲ್ಲೆಯ ಪರಿಸರ, ಸಂಸ್ಕೃತಿ, ಕೃಷಿ, ನದಿ-ಬೆಟ್ಟ, ಅರಣ್ಯ ಪ್ರದೇಶಗಳನ್ನು ಸ್ಮರಿಸಿದರು.

ಜಿಲ್ಲೆಯ ವೈಶಿಷ್ಟ್ಯತೆಯನ್ನು ಸುಲಲಿತವಾಗಿ ಉಚ್ಚರಿಸಿದ ಪ್ರಧಾನಿ ಮೋದಿ ಅವರನ್ನು ಕಂಡು ಜನಸ್ತೋಮ ಖುಷಿಪಟ್ಟರು.

ಸಕ್ರೆಬೈಲು ಆನೆ ಶಿಬಿರ, ತ್ಯಾವರೆಕೊಪ್ಪ ಸಿಂಹ ಧಾಮವನ್ನೂ ಪ್ರಸ್ತಾಪಿಸಿದ್ರು. ನಂತರ ಗಂಗಾ ಸ್ನಾನ, ತುಂಗಾ ಪಾನ ಎಂದು ಬಣ್ಣಿಸಿದ ಮೋದಿ, ಗಂಗಾ ನದಿಯಲ್ಲಿ ಸ್ನಾನ, ತುಂಗಾ ನದಿಯ ನೀರು ಕುಡಿಯದಿದ್ದರೆ ಜೀವನ ಅಪೂರ್ಣವಾಗುತ್ತದೆ ಎಂದರು.

ರಾಷ್ಟ್ರಕವಿ ಕುವೆಂಪು, ಸಂಸ್ಕೃತ ಗ್ರಾಮ ಮತ್ತೂರು, ಸಿಗಂಧೂರು ಚೌಡೇಶ್ವರಿ, ಕೋಟೆ ಆಂಜನೇಯ, ಶ್ರೀಧರ ಸ್ವಾಮೀಜಿ ಆಶ್ರಮ ಮುಂತಾದ ಆಧ್ಯಾತ್ಮ ಸ್ಥಳ, ಗ್ರಾಮಗಳನ್ನು ಶಿವಮೊಗ್ಗ ಹೊಂದಿದೆ ಎಂದೂ ಹೇಳಿದರು. ಹಾಗೆ, ಆಗುಂಬೆಯ ಸೂರ್ಯಾಸ್ತಮಾನ, ಈಸೂರಿನ ಬಗ್ಗೆಯೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಜನತೆಯ ಗಮನ ಸೆಳೆದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!