ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಕ್ ಕಳವು, ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು, ಎರಡು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಶಪಡಿಸಿಕೊಳ್ಳಲಾದ 76 ದ್ವಿಚಕ್ರ ವಾಹನ ಗಾಂಜಾ ಎಲೆಗಳ ಮಾದರಿಯಲ್ಲಿ ನಿಲ್ಲಿಸಿದ ವಿಡಿಯೋ ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಜನಜಾಗೃತಿಗೆ ಮುಂದಾಗಿದ್ದಾರೆ.
Stealing to weed,
Wheeling on the stolen bikes
And then selling them at a price ,
Insta fame and followers
Wheeling dealing biker and thief,
Now cooling his heels in lock up.
Recovered 76 bikes across 2 police stations!
Kudos to the ever alert police team !
Revive pic.twitter.com/gWKSBmWhLI— C K Baba. I.P.S (@DCPSEBCP) July 23, 2022
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ ಸಿ. ಕೆ. ಬಾಬಾ, ಮಾದಕ ವಸ್ತುಗಳನ್ನು ಖರೀದಿಸಲು ದ್ವಿಚಕ್ರ ವಾಹನ ಕದಿಯುವುದು, ಕದ್ದ ವಾಹನಗಳಲ್ಲಿ ವೀಲಿಂಗ್ ಮಾಡುವುದು. ಬಳಿಕ ಅವುಗಳನ್ನು ಮಾರಾಟ ಮಾಡಲಾಗುವ ಬೆಳವಣಿಗೆ ನಡೆಯುತ್ತಿದೆ. ಈಗ ಅವರು ಲಾಕಪ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. 2 ಪೊಲೀಸ್ ಠಾಣೆಗಳಲ್ಲಿ 76 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.