ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮೊದಲ ಆಟಿಕೆ ತಯಾರಿಕೆ ಕ್ಲಸ್ಟರ್ ಯೋಜನೆಗೆ ಬಿಜೆಪಿ ಸರ್ಕಾರ ಚಾಲನೆ ನೀಡಿತ್ತು. ಕೊಪ್ಪಳದಲ್ಲಿ ಟಾಯ್ ಕ್ಲಸ್ಟರ್‌ಗೆ ಜಾಗ ನಿಗದಿ ಮಾಡಿದ್ದು, ಈ ಸ್ಥಳವು ಆಟಿಕೆ ಕ್ಲಸ್ಟರ್‌ಗೆ ಸೂಕ್ತವಲ್ಲ ಎಂದು ಉದ್ಯಮ ತಜ್ಞರು ಮಾಹಿತಿ ನೀಡಿದ್ದಾರೆ.
ಬಹು ನಿರೀಕ್ಷೆಯ ಮಹತ್ವಾಕಾಂಕ್ಷಿ ಯೋಜನೆಗೆ ಮೂರು ವರ್ಷದ ಹಿಂದೆ ಚಾಲನೆ ನೀಡಿತ್ತು. ಬಿಜೆಪಿ ಆಡಳಿತಾವಧಿಯಲ್ಲಿ ಈ ಯೋಜನೆಗೆ ಚಾಲನೆ ನೀಡಿರುವ ಕಾರಣ ಕಾಂಗ್ರೆಸ್ ಸರ್ಕಾರ ಇದರ ಪ್ರಚಾರಕ್ಕೆ ಹೆಚ್ಚಿನ ಆಸಕ್ತಿ ತೋರಿಲ್ಲ. ಆದರೂ ಈ ಜಾಗ ಆಟಿಕೆ ಕ್ಲಸ್ಟರ್ ಆರಂಭಿಸಲು ಸೂಕ್ತ ಅಲ್ಲ, ಇದು ಸರ್ಕಾರದ ಕೆಟ್ಟ ನಿರ್ಧಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.