FOOD | ಘಮ ಘಮಿಸುವ ಪಪಾಯ ಹಲ್ವ ಹೀಗೆ ಮಾಡಿ

ಬೇಕಾಗುವ ಸಾಮಾಗ್ರಿ:

ಸಣ್ಣಗೆ ಹೆಚ್ಚಿದ ಪಪ್ಪಾಯ ಹಣ್ಣು ಎರಡು ಲೋಟ, ತುಪ್ಪ ಅರ್ಧ ಲೋಟ, ಏಲಕ್ಕಿ ಪುಡಿ ಒಂದು ಟೀ ಸ್ಪೂನ್, ಸಕ್ಕರೆ ನಾಲ್ಕು ಲೋಟ, ಸಪ್ಪೆ ಖೋವಾ ಅರ್ಧ ಕಪ್, ಫ್ರೈಮಾಡಿದ ಗೋಡಂಬಿ, ಬಾದಾಮಿ , ದ್ರಾಕ್ಷಿ.

ಮಾಡುವ ವಿಧಾನ

ಸಣ್ಣಗೆ ಹೆಚ್ಚಿಟ್ಟ ಪಪ್ಪಾಯ ಹಣ್ಣನ್ನು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಸರಿಯಾಗಿ ಹುರಿಯಬೇಕು. ನಂತರ ಸಕ್ಕರೆ ಹಾಕಿ ಗೊಟಾಯಿಸಿ. ಗಟ್ಟಿಯಾಗುತ್ತಿದ್ದಂತೆ ಖೋವಾ ಸೇರಿಸಿ ಗೊಟಾಯಿಸಿ. ತಳ ಬಿಡುತ್ತಿದ್ದಂತೆಯೇ ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ , ಬಾದಾಮಿಗಳನ್ನು ಸೇರಿಸಿ. ತುಪ್ಪ ಸವರಿದ ತಟ್ಟೆಗೆ ಮಿಶ್ರಣ ವರ್ಗಾಯಿಸಿ. ಘಮ ಘಮಿಸುವ ಪಪ್ಪಾಯ ಹಲ್ವ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!