ರಷ್ಯಕ್ಕೆ ಪಾವತಿ ಸಮ್ಮತಿಸಿದ ಯುರೋಪಿಯನ್ ಬ್ಯಾಂಕ್- ಯುರೋಪ್ ಮೃದುವಾಗ್ತಿರೋ ಸಂಕೇತವಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ತೈಲ ಬಿಕ್ಕಟ್ಟು ಮತ್ತು ಮುಂಬರುತ್ತಿರುವ ಚಳಿಗಾಲದ ಹಿನ್ನೆಲೆಯಲ್ಲಿ ರಷ್ಯದಿಂದ ತೈಲ ಆಮದು ಮಾಡುಕೊಳ್ಳುವ ಕುರಿತು ಯುರೋಪ್‌ ನಿಧಾನವಾಗಿ ಮೃದು ಧೋರಣೆ ತಾಳುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ
ಉಕ್ರೇನ್ ಮೂಲಕ ರಷ್ಯಾದ ತೈಲ ಸಾಗಣೆಗೆ ಪಾವತಿಯನ್ನು ಯುರೋಪಿಯನ್ ಬ್ಯಾಂಕ್ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ತೈಲಕಂಪನಿ ಸ್ಲೋವ್ನಾಫ್ಟ್ ಮತ್ತು ಇನ್ನೊಂದು ಕಂಪನಿಯು ಮಧ್ಯ ಯುರೋಪ್‌ಗೆ ತೈಲ ಪೂರೈಕೆಯನ್ನು ನಿಲ್ಲಿಸಿದ ಕಾರಣವನ್ನು ತೆಗೆದುಹಾಕಿದೆ.

ಇ ಪಾವತಿಯನ್ನು ಎಲ್ಲಾ ಪಕ್ಷಗಳೂ ದೃಢೀಕರಿಸಿದರೆ ಜೆಕ್‌ ಗಣರಾಜ್ಯಕ್ಕೆ ನಿಲ್ಲಿಸಲ್ಪಟ್ಟ ತೈಲ ಹರಿವನ್ನು ಮರುಸ್ಥಾಪಿಸಬಹುದಾಗಿದೆ. ಈ ಒಂದು ವಾರದ ಹಿಂದೆ ಮಾಸ್ಕೋದಿಂದ ಉಕ್ರೇನ್‌ಗೆ ಸಾರಿಗೆ ಶುಲ್ಕ ಪಾವತಿಯ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿದ್ದವು ಈ ಕಾರಣದಿಂದ ಆಗಸ್ಟ್ 4 ರಿಂದ ಜೆಕ್ ರಿಪಬ್ಲಿಕ್, ಹಂಗೇರಿ ಮತ್ತು ಸ್ಲೋವಾಕಿಯಾಕ್ಕೆ ತೈಲ ಸರಬರಾಜುಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಪ್ರಸ್ತುತ ತೈಲಸಾಗಣೆ ಪಾವತಿಗೆ ಯುರೋಪಿಯನ್‌ ಬ್ಯಾಂಕ್‌ ಒಪ್ಪಿಕೊಂಡಿದೆ. ಇದು ತೈಲ ಪೂರೈಕೆಗೆ ರಷ್ಯಾದ ಮೇಲೆ ಯುರೋಪಿಯನ್‌ ರಾಷ್ಟ್ರಗಳು ಮೃದು ಧೋರಣೆ ಹೊಂದುತ್ತಿರುವುದನ್ನು ಸೂಚಿಸುವಂತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!