ರಷ್ಯ ತೈಲದ ಕುರಿತ ನಿಯೋಜಿತ ನಿರ್ಬಂಧವನ್ನು ಸದ್ದಿಲ್ಲದೇ ಸಡಿಲಿಸಿಕೊಳ್ಳುತ್ತಿವೆ ಯುರೋಪಿನ ರಾಷ್ಟ್ರಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ಬಯಸುವ ಚಳಿಗಾಲ ಎದುರಿಗಿರುವುದರಿಂದ ಯುರೋಪ್ ರಾಷ್ಟ್ರಗಳು ರಷ್ಯ ವಿರುದ್ಧ ಮೆತ್ತಗಾಗುತ್ತಿವೆಯಾ? ಅಂಥ ಸೂಚನೆಗಳು ಕಾಣುತ್ತಿವೆ.
ರಷ್ಯದ ತೈಲ ಹೊತ್ತೊಯ್ಯುವ ನೌಕೆಗಳಿಗೆ ವಿಮೆಯನ್ನೇ ಕೊಡಬಾರದು ಹಾಗೂ ರಷ್ಯವನ್ನು ಲಂಡನ್‌ನ ಕಡಲ ವಿಮಾ ಮಾರುಕಟ್ಟೆಯಿಂದ ಹೊರಹಾಕಬೇಕು ಎಂದು ಈ ರಾಷ್ಟ್ರಗಳು ಮೊದಲು ಘೋಷಿಸಿಕೊಂಡಿದ್ದವು. ಆದರೆ ಆ ನಿಟ್ಟಿನಲ್ಲೀಗ ವಿಳಂಬವಾಗುತ್ತಿದೆ. ಮಾಸ್ಕೋವನ್ನು ಹೊರಹಾಕುವ ಯೋಜನೆಯನ್ನು ವಿಳಂಬಗೊಳಿಸಿ ಕೆಲವು ಅಂತರರಾಷ್ಟ್ರೀಯ ಸಾಗಣೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಎರಡು ತಿಂಗಳ ಹಿಂದೆ ಬ್ರಿಟೀಷ್‌ ಸರ್ಕಾರದಿಂದ ಸಂಘಟಿತ ಕ್ರಮದ ನಿರೀಕ್ಷೆಯಲ್ಲಿ ಯುರೋಪ್‌, ರಷ್ಯಾದ ತೈಲವನ್ನು ಸಾಗಿಸುವ ಹಡಗುಗಳಿಗೆ ಕಡಲ ವಿಮೆಯನ್ನು ಒದಗಿಸುವುದರ ಮೇಲೆ ವಿಶ್ವದಾದ್ಯಂತ ನಿಷೇಧ ಘೋಷಿಸಿತು. ಲಂಡನ್‌ ಸಮುದ್ರ ವಿಮಾ ಉದ್ಯಮದ ಕೇಂದ್ರವಾಗಿರುವುದರಿಂದ ನಿಯಮಗಳನ್ನು ಜಾರಿಗೆ ತರುವಲ್ಲಿ ಯುಕೆಯ ಭಾಗವಹಿಸುವಿಕೆ ಅತ್ಯಂತ ಪ್ರಮುಖವಾಗಿದೆ. ಆದರೆ ಇದುವರೆಗೂ ಬ್ರಿಟೀಷ್‌ ಸರ್ಕಾರವು ಅಂತಹ ಯಾವುದೇ ನಿಯಮವನ್ನು ಜಾರಿಗೆ ತಂದಿಲ್ಲ.

ಇವುಗಳ ನಡುವೆ ಜಾಗತಿಕ ಇಂಧನ ಭದ್ರತೆಯ ಮೇಲೆ ಕಳವಳಗಳಿರುವುದರಿಂದ ರಷ್ಯಾದ ಕಂಪನಿಗಳೊಂದಿಗೆ ವ್ಯವಹಾರ ಮಾಡುವುದರ ಮೇಲಿನ ಕೆಲವು ನಿರ್ಬಂಧಗಳನ್ನು ಬ್ರಸೇಲ್ಸ್‌ ತಿದ್ದುಪಡಿ ಮಾಡಿದೆ. ಯುರೋಪ್‌ ಜಾರಿಗೆ ತರಲು ಹೊರಟಿರುವ ಸಾಗರ ವಿಮಾ ನಿರ್ಬಂಧವು ಇಲ್ಲಿಯವರೆಗಿನ ಅತಿ ಕಠಿಣ ನಿರ್ಬಂಧವಾಗಿದೆ, ಆದರೆ ರಷ್ಯಾದ ಮೇಲಿನ ನಿರ್ಬಂಧ ಹೇರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತದೆ ಎಂಬ ಕಳವಳವನ್ನು ಯುಎಸ್‌ ಅಧಿಕಾರಿಗಳು ವ್ಯಕ್ತಯಪಡಿಸಿದ್ದಾರೆ.

ರಷ್ಯಾದ ಸರಕುಗಳಿಗೆ ಸಾಗರ ವಿಮೆ ನೀಡುವುದರ ಮೇಲೆ ನಿರ್ಬಂಧ ಹೇರುವ ಯುರೋಪ್‌ ನಿರ್ಧಾರವನ್ನು ಯುಕೆ ಒಪ್ಪಿಕೊಂಡಿದೆ ಎಂದು ಯುರೋಪಿಯನ್ ಮತ್ತು ಬ್ರಿಟಿಷ್ ಅಧಿಕಾರಿಗಳು ಮೇ ತಿಂಗಳಲ್ಲಿ ತಿಳಿಸಿದ್ದರು. ಆದರೆ ಈ ನಿಯಮಗಳು ರಷ್ಯಾವು ಯುಕೆಗೆ ಸಾಗಿಸುವ ಹಡಗುಗಳಿಗೆ ವಿಮೆ ನೀಡುವುದನ್ನು ಮಾತ್ರ ನಿಷೇಧಿಸುತ್ತವೆ. ಅದೂ ಕೂಡ ಡಿಸೆಂಬರ್‌ 31ರ ನಂತರ ಅನ್ವಯವಾಗುತ್ತದೆ. ರಷ್ಯಾದ ತೈಲ ಆಮದನ್ನು ಕಾನೂನುಬಾಹಿರವೆಂದು ಪರಿಗಣಿಸುವ ಶಾಸನ ವರ್ಷದ ಕೊನೆಯಲ್ಲಿ ಪರಿಚಯಿಸಲಾಗುತ್ತಿದೆ. ಆದರೆ ರಷ್ಯಾದಿಂದ ಇತರ ದೇಶಗಳಿಗೆ ಸಾಗಣೆ ಸೇವೆಗಳನ್ನು ಒದಗಿಸುವುದನ್ನು ನಿಷೇಧಿಸುವುದಿಲ್ಲ ಎಂದು ಯುಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!