Thursday, August 11, 2022

Latest Posts

ಪತ್ತೆಯಾಗಿದೆ ನೀರಿನಲ್ಲಿ ತೇಲುತ್ತಿರುವ ʻರಾಮ್‌ʼ ಎಂದು ಬರೆದ ಕಲ್ಲು: ರಾಮಸೇತುಗೆ ಸಿಕ್ಕ ಸಾಕ್ಷ್ಯ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಇಸಾನ್ ನದಿಯ ನೀರಿನಲ್ಲಿ ತೇಲುತ್ತಿರುವ ಕಲ್ಲೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಲ್ಲು ‘ರಾಮಸೇತು’ ಕಲ್ಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಯುಪಿಯ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲಿ ಬಂದಿದೆ. ಇದರ ಇನ್ನೊಂದು ವೈಶಿಷ್ಟ್ಯವೆಂದರೆ ಕಲ್ಲಿನ ಮೇಲೆ ಹಿಂದಿ ಭಾಷೆಯಲ್ಲಿ ‘ರಾಮ್’ ಎಂದು ಬರೆಯಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಈ ಕಲ್ಲು ಖಂಡಿತವಾಗಿಯೂ ಶ್ರೀರಾಮನಿಂದ ನಿರ್ಮಿಸಲ್ಪಟ್ಟಿದೆ ಮತ್ತು ಇದು ‘ರಾಮಸೇತುವಿನ ಕಲ್ಲು’ ಎಂದು ದೃಢವಾಗಿ ನಂಬಿದ್ದಾರೆ.

ಜುಲೈ 30 (2022) ರಂದು, ಮೀನು ಹಿಡಿಯಲು ನದಿಗೆ ತೆರಳಿದ್ದ ಮಕ್ಕಳಿಗೆ ಹಿಂದಿಯಲ್ಲಿ ‘ರಾಮ್’ ಎಂದು ಬರೆದಿರುವ ಈ ಕಲ್ಲು ಸಿಕ್ಕಿದೆ. ಕಲ್ಲು 5.7 ಕೆಜಿ ತೂಕವಿದ್ದರೂ ನೀರಿನಲ್ಲಿ ತೇಲುತ್ತಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

ರಾಮ ಸೀತಾದೇವಿಯನ್ನು ಹುಡುಕುತ್ತಾ ಶ್ರೀಲಂಕಾವನ್ನು ತಲುಪಲು ನೀರಿನ ಮೇಲೆ ತೇಲುತ್ತಿರುವ ಕಲ್ಲುಗಳಿಂದ ರಾಮಸೇತುವನ್ನು ವಾನರಸೇನನ ಸಹಾಯದಿಂದ ನಿರ್ಮಿಸಿದನು ಎಂದು ಹಿಂದೂಗಳು ನಂಬುತ್ತಾರೆ. ಈ ಘಟನೆಗೆ ಸಾಕ್ಷಿ ಇದೀಗ ನದಿ ನೀರಿನಲ್ಲಿ ತೇಲುತ್ತಿರುವ ಕಲ್ಲು ಎನ್ನಲಾಗುತ್ತಿದೆ.  ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಾ ಗ್ರಾಮಸ್ಥರು ಕಲ್ಲಿಗೆ ಪೂಜೆ ಮಾಡುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss