CINE | ಅಂತೂ ಬಾಲಿವುಡ್‌ಗೆ ಕಾಲಿಟ್ಟ ನಟ ಸೂರ್ಯ, ಆದರೆ ಹೀರೋ ಪಾತ್ರಕ್ಕಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಟ ಸೂರ್ಯ ಸಹ ಬಾಲಿವುಡ್​ಗೆ ಹೋಗುತ್ತಿದ್ದಾರೆ. ದೊಡ್ಡ ಸಿನಿಮಾ ಒಂದರಲ್ಲಿ ವಿಲನ್ ಆಗಿ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆ ಸಿನಿಮಾದಲ್ಲಿ ವಿಲನ್ನೇ ಹೀರೋ!

ಬಾಲಿವುಡ್​ನಲ್ಲಿ ಕೆಲವು ಸಿನಿಮಾ ಸರಣಿಗಳು ದೊಡ್ಡ ಹಿಟ್ ಎನಿಸಿಕೊಂಡಿವೆ. ದಶಕಗಳು ಕಳೆದರೂ ಆ ಸಿನಿಮಾ ಸರಣಿಗೆ ಅಭಿಮಾನಿಗಳು ಕಡಿಮೆ ಆಗಿಲ್ಲ ಅಂಥಹಾ ಒಂದು ಸರಣಿಯಲ್ಲಿ ‘ಧೂಮ್’ ಪ್ರಮುಖವಾದುದು. 20 ವರ್ಷದ ಹಿಂದೆ ಬಿಡುಗಡೆ ಆದ ಮೊದಲ ‘ಧೂಮ್’ ಸಿನಿಮಾ ಬಾಲಿವುಡ್​ನಲ್ಲಿ ವಿಲನ್​ಗಳ ಬಗ್ಗೆ ಇದ್ದ ಪರ್ಸೆಪ್ಷನ್ ಅನ್ನೇ ಬದಲಿಸಿತು.

ಏಕೆಂದರೆ ಈ ಸಿನಿಮಾನಲ್ಲಿ ವಿಲನ್ನೇ ಹೀರೋ. ಅಂದರೆ ಕಳ್ಳರೇ ಈ ಸಿನಿಮಾದ ಹೀರೋಗಳು. ಇದೀಗ ‘ಧೂಮ್ 4’ ಚಿತ್ರೀಕರಣ ಆರಂಭಕ್ಕೆ ಕ್ಷಣಗಣನೆ ಇದ್ದು, ಸಿನಿಮಾದ ಕಳ್ಳನ ಪಾತ್ರದಲ್ಲಿ ಟಾಲಿವುಡ್ ಸ್ಟಾರ್ ನಟ ಸೂರ್ಯ ಮಿಂಚಲಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!