ಹೊಸದಿಗಂತ ನಾಗಮಂಗಲ :
ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಕೋಮು ಗಲಭೆಯಲ್ಲಿ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಆಟೋ ಮೊಬೈಲ್ಸ್ ಸೇರಿದಂತೆ ಹಲವು ಸ್ಕೂಟರ್ ಗ್ಯಾರೇಜ್ ಮತ್ತು ಪಂಚರ್ ಶಾಪ್‌ಗಳಿಗೆ ಕಿಡಿಗೇಡಿಗಳು ಬೆಂಕಿಹಚ್ಚಿದ್ದರಿಂದ ಅಂಗಡಿಯಲ್ಲಿದ್ದ ಒಟ್ಟು 25ಲಕ್ಷ ಮೌಲ್ಯದ ಟೈಯರ್‌ಗಳು, ಪಂಚರ್ ಹಾಕುವ ಮೆಷಿನ್, ರಿಪೇರಿಗೆ ಬಂದಿದ್ದ ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದವು.
ಘಟನೆ ಸಂಭವಿಸಿ 40ಗಂಟೆ ಕಳೆದರೂ ಕೂಡ ಅಂಗಡಿಯೊಳಗಿನ ಬೆಂಕಿಯ ಕಿಚ್ಚು ಆರಿರಲಿಲ್ಲ. ಶುಕ್ರವಾರ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಅಂಗಡಿಗಳ ಮೇಲ್ಚಾವಣಿ ಮತ್ತು ಕಬ್ಬಿಣದ ಶೆಲ್ಟರ್‌ಗಳನ್ನು ಸುತ್ತಿಗೆಯಿಂದ ಹೊಡೆದು ಕಳಚಿ ಬೆಂಕಿ ನಂದಿಸಿದರು.