Wednesday, November 29, 2023

Latest Posts

ಆರು ತಿಂಗಳಾದ್ರೂ ಸಿಎಂ ಸಿದ್ದುಗೆ ಸರ್ಕಾರದ ಮೇಲೆ ಹಿಡಿತ ಇಲ್ಲ: ಬಿಎಸ್‌ವೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಅರ್ಧವರ್ಷವಾದ್ರೂ, ಸರ್ಕಾರದ ಗಾಡಿ ಮುಂದೆ ಹೋಗುತ್ತಿಲ್ಲ. ರಾಶಿ ರಾಶಿ ಭರವಸೆಗಳೊಂದಿಗೆ ಸರ್ಕಾರ ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅದನ್ನು ಈಡೇರಿಸೋದನ್ನು ಮರೆತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದು ಇದೇ ಮೊದಲೇನಲ್ಲ, ಆದ್ರೂ ಅವರಿಗೆ ಸರ್ಕಾರದ ಮೇಲೆ ಹಿಡಿತ ಇಲ್ಲ. ಆರು ತಿಂಗಳು ನಾವು ಸುಮ್ಮನಿದ್ದೆವು, ನಿಧಾನಕ್ಕೆ ಸರಿಯಾಗುತ್ತದೆ ಎಂದು ಕಾಯುತ್ತಿದ್ದೆವು, ಆದರೆ ಇಲ್ಲ ಬದಲಾವಣೆ ಗಾಳಿಯೇ ಇಲ್ಲ. ಕಾದು ಪ್ರಯೋಜನವೂ ಇಲ್ಲ ಎಂದಿದ್ದಾರೆ.

ಈ ಸರ್ಕಾರ ಜನರ ಪರ ಅನಿಸಿಕೊಳ್ಳೋಕೆ ಏನನ್ನೂ ಮಾಡಿಲ್ಲ, ಮಾಡಿರುವುದೆಲ್ಲಾ ಜನರ ವಿರೋಧಿ ಕೆಲಸಗಳೇ, ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಹೋರಾಟ ಗ್ಯಾರೆಂಟಿ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!