STORY | ದುಡ್ಡು ಮಡಚಿಟ್ಟರೂ, ನೆಲದಲ್ಲಿದ್ದರೂ, ಹರಿದುಹೋಗಿದ್ದರೂ ನಮಗದು ಬೇಕು!

ಶಿಕ್ಷಕಿಯೊಬ್ಬರು ಮಕ್ಕಳಿಗೆ ಪಾಠ ಮಾಡ್ತಾ ಒಂದು ಆಕ್ಟಿವಿಟಿ ಮಾಡೋಕೆ ನಿರ್ಧಾರ ಮಾಡಿದ್ರು. ಹತ್ತನೇ ತರಗತಿ ಮಕ್ಕಳನ್ನು ನೋಡ್ತಾ ಕೈಯಲ್ಲಿ ಐನೂರು ರುಪಾಯಿ ನೋಟಿ ಹಿಡಿದುಕೊಂಡು ಇದು ಯಾರಿಗೆ ಬೇಕು ಎಂದು ಹೇಳಿದ್ರು.

ಇದ್ದ ಅರವತ್ತು ಮಕ್ಕಳಲ್ಲಿ ಅರವತ್ತೂ ಜನ ನನಗೆ ಬೇಕು ಎಂದು ಕೈ ಎತ್ತಿದ್ರು. ಮ್ಯಾಮ್‌ಗೆ ಖುಷಿ ಆಯ್ತು, ಓ ಎಲ್ರಿಗೂ ಬೇಕಾ ಅಂದುಕೊಳ್ತಾ, ಒಬ್ಬರಿಗೆ ಈ ಹಣ ಕೊಟ್ಟೇ ಕೊಡ್ತೀನಿ ಅಂತ ಕೈಯಲ್ಲಿ ಅದನ್ನು ಮಡಚಿ, ಮುದುಡಿದ್ರು. ಈಗ ಮತ್ತೆ ಈ ದುಡ್ಡು ಯಾರಿಗಾದ್ರು ಬೇಕಾ ಅಂತ ಕೇಳಿದ್ರು, ಮತ್ತೆ ಅರವತ್ತಕ್ಕೆ ಅರವತ್ತೂ ಜನ ನಂಗೆ ಬೇಕು ಎಂದು ಕೈ ಎತ್ತಿದ್ರು.

ಶಿಕ್ಷಕಿ ನಗ್ತಾ, ಸರಿ ಅಂತ ಹೇಳಿ ದುಡ್ಡನ್ನು ಮುದ್ದೆ ಮಾಡಿ, ಉಂಡೆ ಥರ ಇಟ್ಕೊಂಡು ಅದನ್ ತೋರ‍್ಸಿ ಈಗ್ಲೂ ಈ ದುಡ್ಡು ಬೇಕಾ ಅಂತ ಕೇಳಿದ್ರು. ಅದ್ಕೆ ಎಲ್ಲಾರೂ ಈಗ್ಲೂ ಬೇಕು ಅಂತ ಕೈ ಎತ್ತಿದ್ರು. ಶಿಕ್ಷಕಿ ನಗ್ತಾ ಒಕೆ ಕೈ ಇಳ್ಸಿ ಅಂದ್ರು.

ಈ ದುಡ್ಡನ್ನು ಯಾರ್ಗೂ ಕೊಡೋದಿಲ್ಲ, ಇದೊಂದ್ ಸಣ್ಣ ಪಾಠ ಅಷ್ಟೆ. ದುಡ್ಡನ್ನು ಮಡಚಿ, ಮುದುಡಿದಾಗ್ಲೂ ನೀವೆಲ್ಲರೂ ಅದನ್ನು ಬೇಕು ಅಂತಿದ್ರಿ. ಇನ್ನು ನಾನು ಎರಡು ಭಾಗ ಮಾಡಿದ್ರು ಅದು ನನಗೆ ಬೇಕು ಅಂತಲೇ ಹೇಳ್ತಿದ್ರಿ. ಈ ದುಡ್ಡು ನೀವು! ಹೌದು, ಜೀವನ ನಿಮ್ಮನ್ನು ಕೆಳಗೆ ತಳ್ಳುತ್ತದೆ, ಮಡಚುತ್ತದೆ, ಉಲ್ಟಾ ಮಾಡಿ ಒಗೆಯಲೂ ಬಹುದು, ಆದರೆ ಈ ದುಡ್ಡಿನ ಥರ ನೀವು ನಿಮ್ಮ ವಾಲ್ಯೂ ಕಳೆದುಕೊಳ್ಳಬಾರದು. ನೀವೆಷ್ಟು ಸ್ಪೆಷಲ್ ಎನ್ನುವುದನ್ನು ಮರೆಯಬಾರದು. ನಿಮ್ಮ ನಿರ್ಧಾರಗಳು ಕೆಲವೊಮ್ಮೆ ತಪ್ಪಾಗಬಹುದು, ಆದ್ರೆ ವ್ಯಕ್ತಿಯೇ ತಪ್ಪು ಅಂತಲ್ಲ. ದುಡ್ಡಿನ ರೀತಿ ನೀವು ನಿಮ್ಮ ವಾಲ್ಯೂ ಮರೆಯಬೇಡಿ ಎಂದು ಹೇಳಿಕೊಟ್ರು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!