ಲೈಫ್ ಜರ್ನಿ ಅಲ್ಲಿ ನಾವೊಂದು ಸ್ಕೆಚ್ ಹಾಕಿದ್ರೆ, ಮೇಲೆ ಕೂತ ಆ ಬ್ರಹ್ಮ ನಮಗೇ ಉಲ್ಟಾ ಸ್ಕೆಚ್ ಹಾಕ್ತಿರ್ತಾನೆ! ಜೀವನ ಅನ್ನೋದು ಒಂಥರಾ ಮಾರ್ನಿಂಗ್ ನ್ಯೂಸ್ ಪೇಪರ್ ಇದ್ದಂಗೆ. ನಾವು ಹೆಡ್‌ಲೈನ್ ಓದಿಕೊಂಡು ರೆಡಿಯಾಗಿದ್ರೆ, ಒಳಗೆ ನ್ಯೂಸೇ ಬೇರೆ ಇರುತ್ತೆ. ಆದ್ರೆ ಒಂದು ವಿಷಯ ಗೊತ್ತಾ? ಕಡೆಗೆ ಏನೇ ಆದ್ರೂ, ಅದು ನಮ್ಮ ಒಳ್ಳೆಯದಕ್ಕೇ ಆಗಿರುತ್ತೆ! ಈ ಸತ್ಯ ನಮಗೆ ತಕ್ಷಣ ಅರ್ಥವಾಗಲ್ಲ, ಸ್ವಲ್ಪ ಲೇಟಾಗಿ ಲೇಟೆಸ್ಟ್ ಆಗಿ ಅರ್ಥವಾಗುತ್ತೆ.
ಅಂದಹಾಗೆ, ನಮ್ಮ ಡೈಲಿ ಲೈಫ್ ಅಲ್ಲಿ ಈ ‘ಟ್ರಿಸ್ಟ್ ಅಂಡ್ ಟರ್ನ್’ ಹೆಂಗೆ ಕೆಲಸ ಮಾಡುತ್ತೆ ಅಂತ ಗೊತ್ತಾ?
ಮಿಸ್ ಆದ್ರೆ ಗೋಳು, ಸಿಕ್ರೆ ಜಂಜಾಟ
ಬೆಳಿಗ್ಗೆ ಎದ್ದು ಅರ್ಜೆಂಟಾಗಿ ಆಫೀಸಿಗೆ ಹೋಗೋಕೆ ಓಡೋಡಿ ಹೋಗ್ತೀವಿ. ಕಣ್ಣೆದುರೇ ಬಸ್ ಹೊರಟು ಹೋಗುತ್ತೆ. ‘ಛೇ! ಇವತ್ತು ದಿನಾನೇ ಹಾಳು’ ಅಂತ ತಲೆಕೆಡಿಸ್ಕೊಂಡು ನಿಂತಿರ್ತೀವಿ. ಆದ್ರೆ ಮುಂದಿನ ಬಸ್ ಹತ್ತಿ ಹೊರಟಾಗ ಗೊತ್ತಾಗುತ್ತೆ ಮುಂದೆ ಆ ಹಳೇ ಬಸ್ಸು ಪಂಚರ್ ಆಗಿ ಟ್ರಾಫಿಕ್ ಜಾಮ್‌ನಲ್ಲಿ ತಗ್ಲಾಕೊಂಡಿರುತ್ತೆ, ನಾವಿದ್ದ ಬಸ್ಸು ಶಾರ್ಟ್‌ಕಟ್‌ನಲ್ಲಿ ಹೋಗಿ ಕರೆಕ್ಟ್ ಟೈಮ್‌ಗೆ ರೀಚ್ ಆಗುತ್ತೆ. ಇದಕ್ಕೆ ಕಣ್ರೀ ಹೇಳೋದು ಬಸ್ಸು ಮಿಸ್ಸಾದ್ರೂ ಲೈಫ್ ಮಿಸ್ಸಾಗಿರಲ್ಲ ಅಂತ!
ರಿಜೆಕ್ಟ್ ಆದ್ರೆ ಬೇಸರ, ಸೆಲೆಕ್ಟ್ ಆದ್ರೆ ಸ್ವರ್ಗ
ನಾವು ತುಂಬಾ ಆಸೆಯಿಂದ ಇಂಟರ್‌ವ್ಯೂ ಕೊಟ್ಟು, ‘ಈ ಕೆಲ್ಸ ಸಿಕ್ರೆ ಲೈಫ್ ಸೆಟಲ್’ ಅಂದ್ಕೋತಿವಿ. ಆದ್ರೆ ಅಲ್ಲಿ ನೋ ಅಂತಾರೆ. ಆಗ ಹಾರ್ಟ್ ಬ್ರೇಕ್ ಆಗಿ ಮೂಲೆಯಲ್ಲಿ ಕೂರ್ತೀವಿ. ಆದ್ರೆ ಕೆಲವೇ ದಿನಗಳಲ್ಲಿ ಅದಕ್ಕಿಂತ ಡಬಲ್ ಸ್ಯಾಲರಿ, ಸೂಪರ್ ಟೀಮ್ ಇರೋ ಇನ್ನೊಂದು ಆಫರ್ ಹುಡುಕಿಕೊಂಡು ಬರುತ್ತೆ. ಆಗ ಅನಿಸುತ್ತೆ, ‘ಅಬ್ಬಾ! ಅಂದು ಆ ಕಂಪನಿಯಲ್ಲಿ ಜಾಬ್ ಸಿಗದೇ ಇದ್ದಿದ್ದೇ ಒಳ್ಳೇದಾಯ್ತು’ ಅಂತ. ಆವಾಗ ನಾವು ಅಂದುಕೊಳ್ಳೋದು ಒಂದೇ.. ಗಾಡ್ ಪ್ಲಾನ್ ಆಲ್ವೇಸ್ ಗ್ರೇಟ್!!
ಕೈಕೊಟ್ರೆ ಕಣ್ಣೀರು, ಆಮೇಲೆ ಸಿಗುತ್ತೆ ಜಾಕ್‌ಪಾಟ್!
ಕ್ರಶ್ ಹಿಂದೆ ಸುತ್ತಿ ಸುತ್ತಿ, ಕೊನೆಗೆ “ನಾವು ಜಸ್ಟ್ ಫ್ರೆಂಡ್ಸ್” ಅಂದಾಗ ಜಗತ್ತೇ ಮುಳುಗಿಹೋದ ಹಾಗೆ ಫೀಲ್ ಕೊಡುತ್ತೆ. ಆದ್ರೆ ಮುಂದೆ ನಮಗಾಗಿ ನಮ್ಮನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋ ಸಂಗಾತಿ ಸಿಕ್ಕಾಗ ಗೊತ್ತಾಗುತ್ತೆ ಅವತ್ತು ಆ ಹಾರ್ಟ್‌ಬ್ರೇಕ್ ಆಗ್ದೇ ಇದ್ದಿದ್ರೆ ಈ ರತ್ನ ನಮಗೆ ಸಿಗ್ತಿರಲಿಲ್ಲ ಅಂತ. ಲೈಫ್ ಅಲ್ಲಿ ಒಂದನ್ನು ಕಳ್ಕೊಂಡ್ರೆ ಇನ್ನೊಂದು ಅದಕ್ಕಿಂತ ಬೆಟರ್ ಆಗಿರೋದು ಸಿಕ್ಕಾಗ ಮುಂಚೆ ಕಳ್ಕೊಂಡಿರೋದ್ರು ಬಗ್ಗೆ ಯೋಚ್ನೆ ಇರ್ಲಿ ಫೀಲ್ ಕೂಡ ಆಗಲ್ಲ!
ಎಲ್ಲಾ ಮೇಲಿರೋನು ಕೊಡೊ ಸರ್‌ಪ್ರೈಸ್
ಲೈಫ್ ಅನ್ನೋದು ನೈಸ್ ರೋಡ್ ಅಲ್ಲ, ಆಗಾಗ ಕಲ್ಲು, ಮಣ್ಣು, ಮುಳ್ಳು, ಅಷ್ಟೇ ಯಾಕೆ ಒಂದೊಂದ್ಸಲ ರೋಡೇ ಕಿತ್ಕೊಂಡು ಬಂದಿರುತ್ತೆ. ನಮಗೆ ಏನು ಬೇಕು ಅನ್ನೋದು ನಮಗೆ ಗೊತ್ತಿರುತ್ತೆ, ಆದ್ರೆ ನಮಗೆ ಏನು ಒಳ್ಳೆಯದು ಅನ್ನೋದು ಆ ವಿಧಿಗೆ ಗೊತ್ತಿರುತ್ತೆ!
ಅದಕ್ಕೇ ಅಲ್ವಾ ಹೇಳೋದು.. ನಮ್ಮ ಪ್ಲಾನ್ ಫ್ಲಾಪ್ ಆದಾಗ ಬೇಸರ ಬೇಡ, ದೇವ್ರು ನಮಗಾಗಿ ದೊಡ್ಡ ಬಿಗ್ ಬಜೆಟ್ ಸಿನಿಮಾ ಪ್ಲಾನ್ ಮಾಡ್ತಿದ್ದಾನೆ ಅಂತ ಅರ್ಥ ಮಾಡ್ಕೊಬಿಡಿ.
ಇವಾಗ ಲಾಸ್ಟ್ ಅಲ್ಲಿ ಏನ್ ಹೇಳಕೆ ಇಷ್ಟಪಡ್ತೀವಿ ಅಂದ್ರೆ.. ನೀವು ಅನ್ಕೊಂಡಿರೋ ಪ್ಲಾನ್ ವರ್ಕೌಟ್ ಆಗ್ಲಿಲ್ಲ ಅಂತ ತಲೆಬಿಸಿ ಮಾಡ್ಕೋಬೇಡಿ. ಆರಾಮಾಗಿ ಕಾಲ್ ಮೇಲೆ ಕಾಲ್ ಹಾಕೊಂಡು ಒಂದು ಒಳ್ಳೆ ಸ್ಟ್ರಾಂಗ್ ಕಾಫಿ ಇಲ್ಲ ಟೀ ಕುಡ್ಕೊಂಡು ಮುಕುದ್ಮೇಲೆ ಸ್ಮೈಲ್ ಮಾಡ್ಕೊಂಡು ಹೇಳಿ.. ಏನೇ ಆದ್ರೂ, ಆಗೋದೆಲ್ಲ ಒಳ್ಳೇದಕ್ಕೆ!!



