ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾ ಸ್ವಾಮಿ ಜೀವಭಿಕ್ಷೆಗಾಗಿ ಅಂಗಲಾಚುತ್ತಿರುವ ಹಾಗೂ ಮೃತಪಟ್ಟ ಫೋಟೊಗಳು ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಈ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಹೆತ್ತವರ ಕರುಳು ಚುರುಕ್ ಎಂದಿದೆ.
ಈ ಬಗ್ಗೆ ರೇಣುಕಾ ಸ್ವಾಮಿ ತಂದೆ ಕಾಶೀನಾಥಯ್ಯ ಮಾತನಾಡಿದ್ದಾರೆ. ‘ನನ್ನ ಮಗನ ಯಾತನೆಯನ್ನು ನೋಡಿ ತಡೆದುಕೊಳ್ಳಲಾಗುತ್ತಿಲ್ಲ. ನನ್ನ ಪುತ್ರನಿಗೆ ಆದ ಪರಿಸ್ಥಿತಿ ಆರೋಪಿಗಳಿಗೂ ಆಗಬೇಕು. ಅಲ್ಲಿದ್ದವರಲ್ಲಿ ಒಬ್ಬರಿಗಾದರೂ ಮನುಷ್ಯತ್ವ ಇಲ್ಲವೇ? ನಮ್ಮ ಆರೋಗ್ಯ ದಿನ ಕಳೆದಂತೆ ಕ್ಷೀಣಿಸುತ್ತಿದೆ, ದರ್ಶನ್‌ಗೂ ಇದೇ ಸ್ಥಿತಿ ಬರಲಿ, ಅವರಷ್ಟೇ ಅಲ್ಲ, ಮಗನ ಸಾವಿಗೆ ಕಾರಣರಾದ ಎಲ್ಲರಿಗೂ ದೇವರು ಇಂಥ ಸಾವನ್ನೇ ಕೊಡಲಿ ಎಂದು ಕಾಶೀನಾಥಯ್ಯ ಹಿಡಿಹಿಡಿ ಶಾಪ ಹಾಕಿದ್ದಾರೆ.